

ಪಡುಬಿದ್ರಿ: ಮೂಲ್ಕಿ ಸದಾಶಿವನಗರದ ಜಮೀಲ್ ಎಂಬುವರಿಂದ ವ್ಯವಹಾರಕ್ಕಾಗಿ ಹಣ ಪಡೆದು ವಾಪಸ್ ನೀಡದೆ ವಂಚಿಸಿರುವ ಬಗ್ಗೆ ಮೂಲ್ಕಿಯ ರಝಾಕ್, ಶಾಹಿದ್ ಎಂಬುವರ ವಿರುದ್ಧ ನ್ಯಾಯಾಲಯದಿಂದ ಬಂದ ಖಾಸಗಿ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆ.ಎಸ್.ರಾವ್ ನಗರ ಕೊಲ್ನಾಡ್ ಸರ್ಕಾರಿ ಶಾಲೆಯ ಬಳಿ ಹಣ್ಣು ಮತ್ತು ತರಕಾರಿ ವ್ಯಾಪಾರದ ಅಂಗಡಿ ಹೊಂದಿದ್ದ ರಝಾಕ್ ವರ್ಷದ ಹಿಂದೆ ಜಮೀಲ್ ಬಳಿ ತಿಂಗಳೊಳಗೆ ವಾಪಸ್ ನೀಡುವುದಾಗಿ 2 ಲಕ್ಷ ರೂ. ಪಡೆದುಕೊಂಡಿದ್ದರು. ಆದರೆ ರಝಾಕ್ ಮತ್ತು ಶಾಹಿದ್ ಹಣ ವಾಪಸ್ ನೀಡದೆ ಸತಾಯಿಸಿರುವುದಲ್ಲದೆ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.