

ಹುಬ್ಬಳ್ಳಿ: ವರ್ಕ್ ಫ್ರಮ್ ಹೋಮ್ ಕೆಲಸದ ಹೆಸರಿನಲ್ಲಿ ಅಪರಿಚಿತರು, ನಗರದ ಮಹಿಳೆಯೊಬ್ಬರ ಖಾತೆಯಿಂದ ಆನ್‌ಲೈನ್ ಮೂಲಕ 7.80 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ನಗರದ ರಸಿಕಾ ಡಿ. ವಂಚನೆಗೆ ಒಳಗಾದವರು. ಇನ್‌ಸ್ಟಾಗ್ರಾಂ ನೋಡುತ್ತಿದ್ದಾಗ ವರ್ಕ್ ಫ್ರಮ್ ಹೋಮ್ ಎಂಬ ಜಾಹೀರಾರು ನೋಡಿ ಕ್ಲಿಕ್ ಮಾಡಿದ್ದಾರೆ. ಆಗ ಕೆಲವೊಂದು ಐಷಾರಾಮಿ ಹೋಟೆಲ್, ಕೆಫೆ ಮತ್ತು ರೆಸ್ಟೊರೆಂಟ್‌ಗಳಿಗೆ ಲೈಕ್ ರಿವ್ಯೆ ಮತ್ತು ಸ್ಟಾರ್ ರೇಟಿಂಗ್ ನೀಡಿದರೆ ಹಣ ಗಳಿಸಬಹುದೆಂದು ವಂಚಕರು ನಂಬಿಸಿದ್ದಾರೆ. 7,80,800 ರೂ. ರಸಿಕಾ ಖಾತೆಯಿಂದ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.