ಕೆಲಸ ಕೊಡಿಸುವ ನೆಪದಲ್ಲಿ ವಂಚನೆ

cybe crime
Published on

ಹುಬ್ಬಳ್ಳಿ: ಎಲ್‌ಎಫ್ ವರ್ಕ್ ಎನ್ನುವ ಕಂಪನಿ ಹೆಸರಿನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ನಗರದ ಮೂವರಿಂದ 3.07 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಲಾಗಿದೆ.

ನಜೀನಾ, ಫರದೀನಾ, ಮಹಮ್ಮದ್ ವಂಚನೆಗೆ ಒಳಗಾದವರು. ವಾಟ್ಸ್‌ಆ್ಯಪ್ ಮೂಲಕ ಲಿಂಕ್ ಕಳುಹಿಸಿದ ಅಪರಿಚಿತರು, ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದಾರೆ. ನಂತರ ಹೂಡಿಕೆ ಹೆಸರಿನಲ್ಲಿ ಅಪ್ಲಿಕೇಷನ್ ಇನ್‌ಸ್ಟಾಲ್ ಮಾಡಿಸಿ, ಹಂತ ಹಂತವಾಗಿ ಮೂವರಿಂದ 3.07 ಲಕ್ಷ ರೂ. ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಸಿಇಎನ್ ಕ್ರೈಂ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net