ಹೆಚ್ಚಿನ ಲಾಭಾಂಶ ನೀಡುವ ನೆಪದಲ್ಲಿ 7 ಲಕ್ಷ ರೂ. ವಂಚನೆ

Cibra
Published on

ಹಾನಗಲ್ಲ: ಕ್ವಾಯಿನ್​ಬಿಟಿಸಿ ವೆಬ್​ಸೈಟ್​ನಲ್ಲಿ ಹಣ ಹೂಡಿಕೆ ಮಾಡಿದರೆ ಶೇ. 40ರಷ್ಟು ಲಾಭಾಂಶ ಕೊಡುತ್ತೇವೆ ಎಂದು ನಂಬಿಸಿ ಮಹಿಳೆಯೊಬ್ಬರಿಗೆ ಬರೋಬ್ಬರಿ 7 ಲಕ್ಷ ರೂ. ವಂಚಿಸಿರುವ ಕುರಿತು ಹಾನಗಲ್ಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಟ್ಟಣದ ಗುಡಿಕೇರಿ ಓಣಿಯ ಮುಬಶರೀನಬಾನು ಖತೀಬ (40) ಎಂಬುವರಿಗೆ ವಂಚಿಸಿರುವುದು.

ಇವರಿಗೆ ಅಪರಿಚಿತರು ಫೋನ್​ ಮಾಡಿ ಪೋನ್​ ಪೇ ಮೂಲಕ ಕ್ವಾಯಿನ್​ಬಿಟಿಸಿ ಎಂಬ ಆನ್​ಲೈನ್​ ವೆಬ್​ಸೈಟ್​ನಲ್ಲಿ ಹಣ ಹೂಡಿಕೆ ಮಾಡಿದರೆ ಶೇ. 40ರಷ್ಟು ಲಾಭಾಂಶ ನೀಡುತ್ತೇವೆ ಎಂದು ನಂಬಿಸಿದ್ದಾರೆ.

ಅದರಂತೆ ಹಂತ ಹಂತವಾಗಿ 7 ಲಕ್ಷ ರೂ. ಹಾಕಿಸಿಕೊಂಡು ವಂಚಿಸಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net