ಹೋಟೆಲ್​ಗಳಿಗೆ ರೇಟಿಂಗ್ಸ್​ ಕೊಡಿಸುವ ನೆಪದಲ್ಲಿ ವಂಚನೆ

Cibra
Published on

ಹಾನಗಲ್ಲ: ಹೋಟೆಲ್​ಗಳಿಗೆ ರೇಟಿಂಗ್ಸ್​ ನೀಡಿದರೆ ಹಣ ನೀಡುತ್ತೇವೆ ಎಂದು ಹೇಳಿ ವಿದ್ಯಾಥಿರ್ಯೊಬ್ಬನಿಗೆ 1.91 ಲಕ್ಷ ರೂ. ವಂಚಿಸಿರುವ ಕುರಿತು ತಾಲೂಕಿನ ಆಡೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಮಲಗುಂದ ಗ್ರಾಮದ ರಾಜು ಬಸವರಾಜ ಪೂಜಾರ (25) ಎಂಬುವರಿಗೆ ವಂಚಿಸಿರುವುದು.

ಈತನಿಗೆ ಕುಳಿತಲ್ಲೆ ಹಣ ಸಂಪಾದಿಸಿ ಎಂದು ಜಾಹೀರಾತು ಕಳುಹಿಸಿದ್ದು, ಆ ಲಿಂಕ್​ನ್ನು ತೆಗೆದು ನೋಡಿದಾಗ ಕೆಲವು ಹೋಟೆಲ್​ಗಳಿಗೆ ರೇಟಿಂಗ್ಸ್​ ಕೊಟ್ಟರೆ ಹಣ ಸಂಪಾದಿಸಬಹುದು ಎಂದು ನಂಬಿಸಿ ಮೊದಲಿಗೆ ಒಂದು ಹೋಟೆಲ್​ಗೆ ರೇಟಿಂಗ್ಸ್​ ಕೊಟ್ಟಿದ್ದಕ್ಕಾಗಿ 4940 ರೂ. ಹಾಕಿದ್ದಾರೆ. ನಂತರ ಇವರ ಖಾತೆ ಮಾಹಿತಿ ಪಡೆದು 1.91 ಲಕ್ಷ ರೂ. ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net