ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ವಂಚನೆ

cybe crime
Published on

ಹುಬ್ಬಳ್ಳಿ: ದೆಹಲಿ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಹೆದರಿಸಿದ ವಂಚಕರು, ಧಾರವಾಡದ ವೈದ್ಯರೊಬ್ಬರಿಂದ 3.40 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ನೀವು ಮಲೇಷಿಯಾಕ್ಕೆ ಕಳುಹಿಸುತ್ತಿರುವ ಪಾರ್ಸಲ್‌ನಲ್ಲಿ ಕಾನೂನು ಬಾಹಿರ ವಸ್ತುಗಳಿವೆ ಎಂದು ಧಾರವಾಡದ ಡಾ. ರಾಮಚಂದ್ರ ಎಂಬುವವರಿಗೆ ಸುಮಿತ್ ಮಿಶ್ರಾ ಎಂಬಾತ ಹೆದರಿಸಿದ್ದಾನೆ. ಅಲ್ಲದೇ ನಿಮ್ಮ ಪಾರ್ಸಲ್‌ತಡೆ ಹಿಡಿಯಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಎಂದು ಕರೆ ವರ್ಗಾಯಿಸಿದ್ದಾನೆ. ಆ ಮೇಲೆ ಹಂತ ಹಂತವಾಗಿ 3.40 ಲಕ್ಷ ರೂ. ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net