54 ವರ್ಷದ ದೂರುದಾರ ಮಹಿಳೆ 2025ರ ಮೇ ತಿಂಗಳಿನಲ್ಲಿ ಪೇಸ್‌ಬುಕ್ ನೋಡುತ್ತಿದ್ದಾಗ ಡಾ. ಕ್ಲಿಂಟನ್ ಸ್ಮಿತ್ ಎಂಬ ವ್ಯಕ್ತಿಯ ಪರಿಚಯವಾಗಿದೆ. ಅನಂತರ ಆತ ಮಹಿಳೆಯ ವಾಟ್ಸ್ ಆ್ಯಪ್ ನಂಬರ್ ಪಡೆದು, ವಾಟ್ಸ್‌ಆ್ಯಪ್ ನಲ್ಲಿ ಸಂದೇಶ ಕಳುಹಿಸಿ ತಾನು ನೆದರ್ ಲ್ಯಾಂಡ್ ನಲ್ಲಿ ವಾಸವಾಗಿದ್ದು, ಕಾರ್ಡಿಯೋಲಾಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದ್ದಾನೆ. ಬಳಿಕ ಪರಸ್ಪರ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.