ಕೆಲಸ ಕೊಡಿಸುವುದಾಗಿ 2.10 ಲಕ್ಷ ರೂ. ವಂಚನೆ

Doddapete police station
ದೊಡ್ಡಪೇಟೆ ಪೊಲೀಸ್ ಠಾಣೆ
Published on

ಶಿವಮೊಗ್ಗ: ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನಕಲಿ ಆದೇಶ ಕಾಪಿ ನೀಡಿ ಶಿವಮೊಗ್ಗದ ಯುವಕನೊಬ್ಬನಿಗೆ 2.10 ಲಕ್ಷ ರೂ. ವಂಚಿಸಲಾಗಿದೆ.

ಯುವಕನ ಸ್ನೇಹಿತನೊಬ್ಬನ ಕಡೆಯಿಂದ ಹೈದರಾಬಾದ್‌ನ ಮಹೇಶ್ ಎಂಬಾತನ ಪರಿಚಯವಾಗಿತ್ತು. ಆತ ಯುವಕನಿಗೆ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಹಂತ ಹಂತವಾಗಿ ಹಣ ಪಡೆದು 2023ರ ಡಿಸೆಂಬರ್‌ನಲ್ಲಿ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ನೇಮಕಾತಿ ಪತ್ರ ಕಳುಹಿಸಿದ್ದ.

ಪರಿಶೀಲಿಸಿದಾಗ ಆ ನೇಮಕಾತಿ ಆದೇಶ ನಕಲಿ ಎಂಬುದು ಯುವಕನಿಗೆ ಗೊತ್ತಾಗಿತ್ತು. ಈ ಹಿನ್ನೆಲೆ ಮಹೇಶ್‌ಗೆ ಕರೆ ಮಾಡಿ ಹಣ ಹಿಂತಿರುಗಿಸುವಂತೆ ತಿಳಿಸಿದ್ದ. ಆದರೆ ಈವರೆಗು ಆತ ಹಣ ಹಿಂತಿರುಗಿಸದ ಹಿನ್ನೆಲೆ ಯುವಕ ದೂರು ನೀಡಿದ್ದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net