ಆನ್‌ಲೈನ್ ಜಾಬ್ ನೆಪದಲ್ಲಿ 10.46 ಲಕ್ಷ ರೂ. ವಂಚನೆ

Fruad
Published on

ಮಂಗಳೂರು: ಆನ್‌ಲೈನ್ ಜಾಬ್ ಎಂದು ನಂಬಿಸಿ ಹಂತಹಂತವಾಗಿ 10.46ಲಕ್ಷ ರೂ. ವಂಚನೆಗೈದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ 18ರಂದು ದೂರುದಾರರ ವಾಟ್ಸಪ್‌ಗೆ ಲಿಂಕ್‌ವೊಂದನ್ನು ಕಳುಹಿಸಿದ್ದು, ಅದನ್ನು ಅದುಮಿದಾಗ ಟೆಲಿಕಾಮ್ ಖಾತೆ ತೆರೆದುಕೊಂಡಿದೆ. ಅದರಲ್ಲಿ ಚಾನಲ್ ಸಿಕ್ಕಿದ್ದು, ಟೆಲಿಗ್ರಾಮ್ ಖಾತೆಗೆ ಚಾಟ್ ಮಾಡಿದಾಗ ಸಂದೇಶ ಸ್ವೀಕರಿಸಿದ ವ್ಯಕ್ತಿ ತನ್ನನ್ನು ಅಂಜಲಿ ಡಿಜಿಟ್ ಕಂಪನಿ ಕೆಲಸ ಮಾಡುವುದಾಗಿ ತಿಳಿಸಿರುತ್ತಾರೆ. ದೂರುದಾರರು ಯೂಟ್ಯೂಬ್ ಚಾನೆಲ್ ಅದುಮಿದ್ದು, ಅದರಲ್ಲಿ ಒಂದು ಸ್ಕ್ರೀನ್ ಶಾರ್ಟ್‌ಗೆ 41ರೂ. ಸಿಗುವುದಾಗಿ ತಿಳಿಸಿದ್ದರು. ಅದರಂತೆ ದಿನಕ್ಕೆ 10 ಸ್ಕ್ರೀನ್ ಶಾರ್ಟ್‌ಗಳನ್ನು ಕಳುಹಿಸುತ್ತಿದ್ದು, ನಂತರ ಡಿಜಿಟ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಲಾಭಾಂಶ ದೊರೆಯುವುದಾಗಿ ತಿಳಿಸಿದ್ದಾರೆ. ಇದನ್ನು ನಂಬಿದ ದೂರುದಾರರು ಯುಪಿಎಲ್ ನ್‌ಟೆ ಮತ್ತು ಆರ್‌ಟಿಜಿಎಸ್ ಮೂಲಕ ಹಂತಹಂತವಾಗಿ 10.46ಲಕ್ಷ ರೂ. ವಂಚಿಸಿದ್ದಾರೆ. ಈ ಬಗ್ಗೆ ದೂರುದಾರರಿಗೆ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net