ಹೂಡಿಕೆ ನೆಪದಲ್ಲಿ ಲಕ್ಷಾಂತರ ರೂ. ವಂಚನೆ

Published on

ಮೈಸೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ ಎಂದು ವಾಟ್ಸ್‌ಆ್ಯಪ್‌ನಲ್ಲಿ ಬಂದ ಸಂದೇಶವನ್ನು ನಂಬಿದ ವ್ಯಕ್ತಿ 4 ಲಕ್ಷ ರೂ. ಕಳೆದುಕೊಂಡಿದ್ದಾರೆ. ಶ್ರೀರಾಂಪುರದ 59 ವರ್ಷದ ವ್ಯಕ್ತಿ ಹಣ ಕಳೆದುಕೊಂಡಿದ್ದು, ಈಗ ಪೊಲೀಸರ ಮೊರೆ ಹೋಗಿದ್ದಾರೆ.

ಆನ್‌ಲೈನ್‌ಮೂಲಕ ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿದರೆ ಲಾಭವಾಗುತ್ತದೆ ಎಂದು ಅಪರಿಚಿತ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ ಸಂದೇಶ ನಂಬಿ ಅಲ್ಲಿದ್ದ ಬ್ಯಾಂಕ್ ಖಾತೆಗೆ 4 ಲಕ್ಷ ರೂ.ವರೆಗೆ ಹಣ ಕಳುಹಿಸಿದ್ದಾರೆ ಎನ್ನಲಾಗಿದೆ.

ಆರಂಭದಲ್ಲಿ ಸ್ವಲ್ಪ ಹಣ ಬಂದು ಬಳಿಕ ವಾಪಸ್ ಡ್ರಾ ಮಾಡಲು ಆಗದಿದ್ದಾಗ ವಂಚನೆ ಮಾಡಿರುವುದು ಗೊತ್ತಾಗಿದೆ. ಬಳಿಕ ಈ ಬಗ್ಗೆ ಸೆನ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net