

ಹಾವೇರಿ: ಇನ್ಸ್ಟಾಗ್ರಾಮ್ ಐಡಿಯಲ್ಲಿ ಚಿನ್ನಾಭರಣ, ಬಟ್ಟೆ, 2 ಲಕ್ಷ ರೂ. ನಗದು ಹಾಗೂ ಐಫೋನ್ ಎಲ್ಲವೂ ಕೊಡುತ್ತೇವೆ ಎಂದು ಹಾಕಿದ್ದ ಜಾಹೀರಾತುದಾರನ ಮಾತು ನಂಬಿ ಮಹಿಳೆಯೊಬ್ಬರು 1.19 ಲಕ್ಷ ರೂ. ಹಾಕಿ ಮೋಸ ಹೋಗಿರುವ ಕುರಿತು ಇಲ್ಲಿಯ ಸೈಬರ್ ಕ್ರೆೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಮಣಿಗಾರ ಓಣಿ ನಿವಾಸಿ ಸಾಹೇದಾಬಾನು ಬಡಿಗೇರ (29) ಎಂಬುವರಿಗೆ ಮೋಸ ಮಾಡಿರುವುದು.
ಇವರು ಇನ್ಸ್ಟಾಗ್ರಾಮ್ ನೋಡುತ್ತಿದ್ದಾಗ ಅದರಲ್ಲಿ ಒಬ್ಬ ವ್ಯಕ್ತಿಯ ಐಡಿಯಲ್ಲಿ ಚಿನ್ನಾಭರಣ, ಬಟ್ಟೆ, 2 ಲಕ್ಷ ರೂ. ನಗದು ಹಾಗೂ ಐಫೋನ್ ಎಲ್ಲವೂ ಕೊಡುತ್ತೇವೆ ಎಂದು ಹಾಕಿದ್ದ ಜಾಹೀರಾತನ್ನು ಕ್ಲಿಕ್ಕಿಸಿದ್ದಾರೆ. ಆಗ ಆತ ಫೋನ್ ಮಾಡಿ ಇದರಲ್ಲಿರುವ ಎಲ್ಲ ವಸ್ತುಗಳು ಪ್ಯಾಕ್ ಮಾಡಲಾಗಿದ್ದು ನಿಮಗೆ ಕಳುಹಿಸಿಕೊಡಲು 1.19 ಲಕ್ಷ ರೂ. ಬೇಕು ಎಂದು ಹಣ ಹಾಕಿಸಿಕೊಂಡಿದ್ದಾನೆ. ನಂತರ ವಸ್ತುಗಳನ್ನು ಕೊಡದೆ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.