ಸರ್ಕಾರಿ ನೌಕರಿ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ

tunga-nagar-police-station
ತುಂಗಾನಗರ ಠಾಣೆ
Published on

ಶಿವಮೊಗ್ಗ: ಗೋಪಿಶೆಟ್ಟಿಕೊಪ್ಪದ ವ್ಯಕ್ತಿಯೊಬ್ಬರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದು ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಪಿಶೆಟ್ಟಿಕೊಪ್ಪದ 43 ವರ್ಷದ ವ್ಯಕ್ತಿಗೆ ದಂಪತಿ ಪರಿಚಯವಾಗಿತ್ತು. ಸರ್ಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. 4 ಲಕ್ಷ ರೂ. ಫೊನ್ ಪೇ ಮತ್ತು 3,96,061 ರೂ. ಅನ್ನು ನಗದು ರೂಪದಲ್ಲಿ ದಂಪತಿ ಮತ್ತು ಅವರ ಪುತ್ರ ಪಡೆದಿದ್ದ.

ಕಳೆದ ಮೂರು ವರ್ಷದಿಂದ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ದಿನ ಮುಂದೂಡುತ್ತಿದ್ದರು. ಕೆಲಸ ಕೊಡಿಸದೇ ಇದ್ದಾಗ ಹಣ ವಾಪಸ್ ಕೇಳಿದ್ದು, 1,70,600 ರೂ. ಮಾತ್ರ ನೀಡಿದ್ದರು. ಉಳಿದ ಹಣ ನೀಡದೆ ವ್ಯಂಗ್ಯ ಮಾತುಗಳನ್ನಾಡಿರುವುದಾಗಿ ದೂರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net