ಪ್ಲಿಪ್ ಕಾರ್ಟ್ ಹೆಸರಲ್ಲಿ ಲಕ್ಷ್ಷಾಂತರ ರೂ. ವಂಚನೆ

Published on

ಬಿಡದಿ: ವ್ಯಕ್ತಿಯೊಬ್ಬರಿಗೆ ಪ್ಲಿಪ್ ಕಾರ್ಟ್ ಹೆಸರಿನಲ್ಲಿ ಕರೆ ಮಾಡಿ, ನೀವು ಮೊಬೈಲ್ ಆರ್ಡರ್ ಮಾಡಿದ್ದೀರಾ ಎಂದು ಕೇಳಿ ಕರೆ ಕಟ್ ಮಾಡುತ್ತಿದಂತೆ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ಕಡಿತವಾಗಿದೆ.

ರಾಘವೇಂದ್ರ ಲೇಔಟ್‌ನ ನಿವಾಸಿ ಸತ್ಯಪ್ರಸಾದ್ ಅವರ ಮೊಬೈಲ್ಗೆ ಕರೆ ಮಾಡಿದ ವ್ಯಕ್ತಿ ನಾವು ಪ್ಲಿಪ್ ಕಾರ್ಟ್‌ನಿಂದ ಕರೆ ಮಾಡುತ್ತಿದ್ದು, ನೀವು 81,197 ರೂ.ಮೌಲ್ಯದ ಮೊಬೈಲ್ ಆರ್ಡರ್ ಮಾಡಿದ್ದೀರಾ ಎಂದು ಹೇಳಿ ಕರೆ ಕಟ್ ಮಾಡಿದ್ದಾರೆ. ಇದಾದ ಕೆಲವೇ ಕ್ಷಣದಲ್ಲೇ ಸತ್ಯಪ್ರಸಾದ್ ಬ್ಯಾಂಕ್ ಖಾತೆಯಿಂದ 81.197 ರೂ. ಕಡಿತವಾಗಿತ್ತು. ತಕ್ಷಣ ಬ್ಯಾಂಕ್‌ಗೆ ಹೋಗಿ ವಿಚಾರಣೆ ಮಾಡಲಾಗಿ 81.197 ರೂ. ಅಲ್ಲದೆ ಒಟ್ಟು 1.17.943 ರೂ. ಕಡಿತಗೊಂಡಿರುವುದು ಗೊತ್ತಾಗಿದೆ. ಈ ಬಗ್ಗೆ ಬಿಡದಿ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net