ಮಾರ್ಷಲ್​ಗಳ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ:ಲೋಕಾಯುಕ್ತಕ್ಕೆ ಎನ್​.ಆರ್​.ರಮೇಶ್​ ದೂರು

N R Ramesh
Published on

ಬೆಂಗಳೂರು: ಮಾರ್ಷಲ್​ಗಳ ಹೆಸರಿನಲ್ಲಿ ಕೋಟ್ಯಂತರ ರೂ.ವಂಚಿಸಿರುವ ಬೃಹತ್​ ಹಗರಣ ಸಂಬಂಧ ಬಿಬಿಎಂಪಿ ಆಡಳಿತಾಧಿಕಾರಿ, ಮುಖ್ಯ ಆಯುಕ್ತ, ವಿಶೇಷ ಆಯುಕ್ತರು ಮತ್ತು ಚೀಫ್​​ ಮಾರ್ಷಲ್​ ರಾಜವೀರ್​ಸಿಂಗ್​ ಸೇರಿ 16 ಹಿರಿಯ ಅಧಿಕಾರಿಗಳ ವಿರುದ್ಧ ಬಿಬಿಎಂಪಿ ಆಡಳಿತ ಪದ ಮಾಜಿ ನಾಯಕ ಎನ್​.ಆರ್​. ರಮೇಶ್​, ಶುಕ್ರವಾರ ದಾಖಲೆ ಸಹಿತ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯದ ನಿರ್ವಹಣೆ ಕಾರ್ಯಗಳಿಗೆಂದು 2017ರಲ್ಲಿ ಪಾಲಿಕೆ ಕೌನ್ಸಿಲ್​ ಸಭೆಯಲ್ಲಿ ಮಾರ್ಷಲ್​ಗಳ ನಿಯೋಜನೆಗೆ ರ್ನಿಣಯ ಕೈಗೊಳ್ಳಲಾಗಿತ್ತು. ಅದರಂತೆ, 198 ವಾರ್ಡ್​ಗಳಲ್ಲಿ ಮಾರ್ಷಲ್​, ಪ್ರತಿ ವಿಧಾನಸಭಾ ೇತ್ರಕ್ಕೆ ಒಬ್ಬರಂತೆ ಹಾಗೂ ಇವರೆಲ್ಲ ನಿರ್ವಹಣೆಗೆ ಮುಖ್ಯ ಮಾರ್ಷಲ್​ ನೇಮಿಸಿಕೊಳ್ಳಲಾಯಿತು. ಆದರೆ, ಕಾಲಾನುಕ್ರಮದಲ್ಲಿ ಕೆರೆಗಳ ಭದ್ರತೆಗೆಂದು, ತ್ಯಾಜ್ಯ ವಿಲೇವಾರಿ ಸಂಸ್ಕರಣಾ ಘಟಕಗಳ ಭದ್ರತೆಗೆಂದು, ಇಂದಿರಾ ಕ್ಯಾಂಟೀನ್​ಗಳ ಭದ್ರತೆಗೆಂದು 700ಕ್ಕೂ ಅಧಿಕ ಮಾರ್ಷಲ್​ ನಿಯೋಜನೆ ಮಾಡಿಕೊಂಡಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ ಪ್ರತಿ ವರ್ಷ ಹತ್ತಾರು ಕೋಟಿ ರೂ. ಹಣ ಲೂಟಿ ಮಾಡಲಾಗಿದೆ. ಈ ಬಗ್ಗೆ ಲೋಕಾಯುಕ್ತ ಎಸ್ಪಿ ವಂಶಿಕೃಷ್ಣಗೆ ದೂರು ಕೊಟ್ಟಿದ್ದಾರೆ.

ಪ್ರತಿ ಮಾರ್ಷಲ್​ಗೆ 25 ಸಾವಿರ ರೂ. ವೇತನವನ್ನು ಪಾಲಿಕೆ ನೀಡುತ್ತಿದ್ದು, ವಾಸ್ತವವಾಗಿ ಮಾರ್ಷಲ್​ಗಳಿಗೆ 17&18 ಸಾವಿರ ರೂ. ಮಾತ್ರ ಸಂದಾಯವಾಗುತ್ತಿದೆ. ಪ್ರತಿ ಮಾರ್ಷಲ್​ಗೆ 5 ಲಕ್ಷ ರೂ. ಮೊತ್ತದ ವಿಮೆ ಮಾಡಿಸಲಾಗಿದೆ. ವಿಮೆ ಹಣವನ್ನು ಪಾಲಿಕೆಯ ಬೊಕ್ಕಸದಿಂದಲೇ ಭರಿಸಲಾಗುತ್ತಿದೆ. ಆದರೆ, ಮಾರ್ಷಲ್​ಗಳು ಕಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆಗಳಿಗೆ ದಾಖಲಾದ ಸಂದರ್ಭದಲ್ಲಿ ಆ ವಿಮೆ ಮೊತ್ತ ಪಡೆದುಕೊಳ್ಳದೆ ಪಾಲಿಕೆ ಬೊಕ್ಕಸದಿಂದಲೇ ಆಸ್ಪತ್ರೆ ವೆಚ್ಚ ಭರಿಸುತ್ತಿರುವುದು ದೊಡ್ಡ ವಂಚನೆವಾಗಿದೆ. ಮಾರ್ಷಲ್​ ಸೇವೆಗೆ ಸಂಬಂಧಿಸಿದಂತೆ ನಾಲ್ಕೆದು ವರ್ಷಗಳಲ್ಲಿ 16 ಕೋಟಿ ರೂ.ಗಿಂತ ಅಧಿಕ ಹಣಕ್ಕೆ ದಾಖಲೆ ಒದಗಿಸದ ಬಗ್ಗೆ ಮಹಾ ಲೆಕ್ಕಪರಿಶೋಧಕರು, 15ಕ್ಕೂ ಹೆಚ್ಚು ಬಾರಿ ಆೇಪಣೆ ಸಲ್ಲಿಸುತ್ತಿದ್ದರೂ ಮುಖ್ಯ ಆಯುಕ್ತರು, ವಿಶೇಷ ಆಯುಕ್ತರು (ಘನತ್ಯಾಜ್ಯ ನಿರ್ವಹಣೆ) ಮತ್ತು ವಿಶೇಷ ಆಯುಕ್ತರು (ಆರೋಗ್ಯ) ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net