ಷೇರು ಮಾರುಕಟ್ಟೆ ಹೆಸರಲ್ಲಿ 26.98 ಲಕ್ಷ ರೂ. ವಂಚನೆ

cybe crime
Published on

ಹುಬ್ಬಳ್ಳಿ: ಆನ್‌ಲೈನ್ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದೆಂದು ನಂಬಿಸಿದ ವಂಚರಕು, ನಗರದ ವ್ಯಕ್ತಿಯೊಬ್ಬರಿಂದ ಆನ್‌ಲೈನ್ ಮೂಲಕ ಬರೋಬ್ಬರಿ 26.98 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಪ್ರಕಾಶ ಒ. ವಂಚನೆಗೆ ಒಳಗಾದವರು. ಪ್ರಕಾಶ ಅವರ ಪತ್ನಿ ಮೊಬೈಲ್‌ನಲ್ಲಿ ನುವಾಪ್ರೊ ಅಪ್ಲಿಕೇಷನ್ ಅಳವಡಿಸಿಕೊಂಡಿದ್ದು, ಅಲ್ಲಿರುವ ಷೇರು ಮಾರುಕಟ್ಟೆ ಮಾಹಿತಿ ಆಧರಿಸಿ 10.09 ಲಕ್ಷ ರೂ. ಹೂಡಿಕೆ ಮಾಡಿದ್ದರು. 14.70 ಲಕ್ಷ ರೂ. ಲಾಭಾಂಶ ತೋರಿಸಿ, ಒಟ್ಟು 25.06 ಲಕ್ಷ ಖಾತೆಯಲ್ಲಿದೆ ಎಂದು ನಂಬಿಸಿದ್ದರು. ಮತ್ತೆ ಹೆಚ್ಚುವರಿ ಹೂಡಿಕೆ ಮಾಡಿ, ಹಣ ಕಳೆದುಕೊಂಡಿರುವ ಕುರಿತು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net