ಟ್ರೇಡಿಂಗ್‌ನಲ್ಲಿ ವಂಚನೆ : 9 ಲಕ್ಷ ರೂ. ಕಳೆದುಕೊಂಡ ಮೈಸೂರಿನ ಸರ್ಕಾರಿ ಅಧಿಕಾರಿ

stock-3
Published on

ಮೈಸೂರು: ಟ್ರೇಡಿಂಗ್‌ನಲ್ಲಿ ಹೆಚ್ಚು ಹಣ ಸಂಪಾದಿಸುವ ಆಸೆಯಿಂದ ಸರ್ಕಾರಿ ಅಧಿಕಾರಿಯೊಬ್ಬರು ವಂಚಕರ ಜಾಲಕ್ಕೆ ಸಿಲುಕಿ 9.38 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಟ್ರೇಡಿಂಗ್‌ಗೆ ಸಂಬಂಧಿಸಿದಂತೆ ವಾಟ್ಸಾಪ್ ಸಂದೇಶದ ಹಿನ್ನೆಲೆಯಲ್ಲಿ ಕೂತೂಹಲದಿಂದ ಅವರು ಗ್ರೂಪ್‌ಗೆ ಸೇರಿದರು. ಪ್ರಾರಂಭದಲ್ಲಿ ಸ್ವಲ್ಪ ಹಣವನ್ನು ಹೂಡಿಕೆ ಮಾಡಿದ್ದರು. ನಂತರ ಹಂತಹಂತವಾಗಿ 9.38 ಲಕ್ಷ ರೂ. ಜಮೆ ಮಾಡಿದರು. ಆದರೆ, ದೊಡ್ಡ ಮೊತ್ತ ಜಮೆ ಮಾಡಿದ ನಂತರ ಅವರಿಗೆ ಹಣ ವಾಪಾಸ್ ಬಾರದೆ ಇದ್ದಾಗ ವಂಚನೆಗೊಳಗಾಗಿರುವುದು ತಿಳಿದು ಬಂತು. ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net