ಷೇರು ಮಾರುಕಟ್ಟೆ ಹೆಸರಿನಲ್ಲಿ ವಂಚನೆ: 38 ಲಕ್ಷ ರೂ.ಕಳೆದುಕೊಂಡ ಮಹಿಳೆ

stock morket
Published on

ಮೈಸೂರು: ನಕಲಿ ಕಂಪನಿಯೊಂದರ ಮೂಲಕ ಮಹಿಳೆಯೊಬ್ಬರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ 38 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಶಿವರಾಂಪೇಟೆಯ ಮಹಿಳೆಯೊಬ್ಬರು ಆನ್‌ಲೈನ್ ಮೂಲಕ ವರ್ಕ್ ಫ್ರಮ್ ಹೋಂ ಕೆಲಸಕ್ಕೆ ಸೇರಿದ್ದರು. ಆ ಕಂಪನಿಯವರ ಆಮಿಷಕ್ಕೆ ಒಳಗಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರು. ಅವರು ಹೇಳಿದಂತೆ ಹಣ ಹೂಡಿಕೆ ಮಾಡಿದರು. ಹಂತ ಹಂತವಾಗಿ ಒಟ್ಟು 38,31,242 ರೂ. ಹಣ ಹೂಡಿಕೆ ಮಾಡಿದ್ದರು. ಹಣ ವಾಪಾಸ್ ಬಾರದೆ ಇದ್ದಾಗ ಮೋಸ ಹೋಗಿರುವ ವಿಚಾರ ತಿಳಿದು ಬುಧವಾರ ದೂರು ನೀಡಿದರು. ಈ ಸಂಬಂಧ ಸೆನ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net