ಷೇರು ಮಾರುಕಟ್ಟೆ ಹೆಸರಿನಲ್ಲಿ ವಂಚನೆ: 15 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

stock-6
Published on

ಮೈಸೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಎಂದು ವಂಚಕರು ನೀಡಿದ ಸಲಹೆಯಿಂದ ನಗರದ ವ್ಯಕ್ತಿಯೊಬ್ಬರು ಹಣ ಹೂಡಿಕೆ ಮಾಡಿ ವ್ಯಕ್ತಿಯೊಬ್ಬರು 15 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಟೆಲಿಗ್ರಾಂ ಆ್ಯಪ್ ಮೂಲಕ ಮನೆಯಲ್ಲಿಯೇ ಕೆಲಸ ಮಾಡಿ ದಿನಕ್ಕೆ 2,500 ರೂ. ಸಂಪಾದಿಸಬಹುದು ಎಂದು ವಂಚಕರು ಅರಂಭದಲ್ಲಿ ನಂಬಿಸಿದರು. ನಂತರ ವಂಚಕರು ಅಮಾಯಕ ವ್ಯಕ್ತಿಯ ಖಾತೆಗೆ ಕೆಲಸ ಮಾಡಿದ್ದಕ್ಕೆ ಹಣ ಹಾಕಿದರು. ಇದಾದ ನಂತರ ಕೆಲಸ ಮಾಡಿದ ಹಣದ ಜತೆಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಹಣ ಸಂಪಾದಿಸಬಹುದು ಎಂದು ನಂಬಿಸಿದರು. ಈ ಮಾತನ್ನು ನಂಬಿದ ವ್ಯಕ್ತಿ ಹಣ ಹೂಡಿಕೆ ಮಾಡಿ 15,19,095 ರೂ. ಕಳೆದುಕೊಂಡಿದ್ದಾರೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net