ಪಾರ್ಟ್ ಟೈಮ್ ಜಾಬ್ ಹೆಸರಿನಲ್ಲಿ ವಂಚನೆ : ಮಹಾರಾಷ್ಟ್ರದ ವ್ಯಕ್ತಿ ಬಂಧನ

Online Fraud in Kodagu
Published on

ಮೈಸೂರು: ಪಾರ್ಟ್ ಟೈಮ್ ಜಾಬ್ ಹೆಸರಿನಲ್ಲಿ ಯುವತಿಗೆ ಆರು ಲಕ್ಷ ರೂ. ವಂಚಿಸಿದ ಮಹಾರಾಷ್ಟ್ರದ ವ್ಯಕ್ತಿಯನ್ನು ಇತ್ತೀಚೆಗೆ ಜಿಲ್ಲಾ ಸೆನ್ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಹಾರಾಷ್ಟ್ರದ ಹಿಮಾಂಶು ಚೌರಾಸಿಯಾ ಬಂಧಿತ ಆರೋಪಿ. ಈತ 24 ಜುಲೈ 2024 ರಂದು ಯುವತಿಯೊಬ್ಬರಿಗೆ ಪಾರ್ಟ್ ಟೈಮ್ ಜಾಬ್ ಕೊಡಿಸುವುದಾಗಿ ಆಮಿಷ ವೊಡಿದ್ದ. ನಂತರ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ಪಡೆಯಬಹುದು ಆಕೆಗೆ ಆಸೆ ಹುಟ್ಟಿಸಿ 6 ಸಾವಿರ ರೂ. ಪಡೆದು 12 ಸಾವಿರ ರೂ. ವಾಪಾಸ್ ನೀಡಿದ. ಇದನ್ನು ನಂಬಿದ ಯುವತಿ ಆತ ಹೇಳಿದಂತೆ ವಿವಿಧ ಬ್ಯಾಂಕ್ ಖಾತೆಗಳಿಗೆ 6 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾಳೆ.

ಆದರೆ ಸಾಕಷ್ಟು ದಿನ ಕಳೆದರೂ ಹಣ ಬಾರದೆ ಇದ್ದಾಗ ವಂಚನೆಯ ಅರಿವಾಗಿ ಜಿಲ್ಲಾ ಸೆನ್ ಠಾಣೆಗೆ ದೂರು ನೀಡಿದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net