ಪಾರ್ಟ್‌ಟೈಂ ಜಾಬ್ ಹೆಸರಿನಲ್ಲಿ ವಂಚನೆ

Digital Arrest
Published on

ಮೈಸೂರು: ಪಾರ್ಟ್‌ಟೈಂ ಜಾಬ್ ಹೆಸರಿನಲ್ಲಿ 30.49 ಲಕ್ಷ ರೂ. ಹೂಡಿಕೆ ಮಾಡಿಸಿ, ವಂಚಿಸಲಾಗಿದೆ. ಮಾರ್ಕೆಟಿಂಗ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಮಕೃಷ್ಣನಗರದ ಯುವಕ, ಅಧಿಕ ಲಾಭದ ಆಸೆಯಿಂದ ಹಣ ಕಳೆದುಕೊಂಡಿದ್ದಾರೆ.


ಪಾರ್ಟ್‌ಟೈಂ ಜಾಬ್ ಬಗ್ಗೆ ಟೆಲಿಗ್ರಾಂನಲ್ಲಿ ಸಂದೇಶ ನೋಡಿದ ಯುವಕ, ಆ ಕುರಿತು ಹೆಚ್ಚಿನ ವಿವರ ಕೇಳಿದ್ದಾರೆ. ಆ ಸಂದರ್ಭದಲ್ಲಿ ಅನುಷಾ ಹೆಸರಿನಲ್ಲಿ ಪರಿಚಯಿಸಿಕೊಂಡ ಮಹಿಳೆ, 1095 ಪ್ರೆಸ್ಟೀಜ್ ಅರ್ನಿಂಗ್ ಗ್ರೂಪ್‌ಗೆ ಸೇರ್ಪಡೆ ಮಾಡಿಸಿದ್ದಾರೆ.


ನಂತರ ಯುವಕನ ಬ್ಯಾಂಕ್ ಖಾತೆಯ ಮಾಹಿತಿ ಪಡೆದು, ಮೊದಲೇ 1,250 ರೂ. ವರ್ಗಾಯಿಸಿದ್ದಾರೆ. ಇನ್ನೂ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಸಿಗುವುದಾಗಿ ನಂಬಿಕೆ ಹುಟ್ಟಿಸಲಾಗಿದೆ.

ಇದರಿಂದ ಆ ಯುವಕ ತನ್ನ ಹಾಗೂ ಸಂಬಂಧಿಕರ ಖಾತೆ ಮೂಲಕ 30.49 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಆದರೆ, ಯಾವುದೇ ಲಾಭ ನೀಡದಿದ್ದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಈ ಕುರಿತು ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net