ನರೇಗಾ ಕಾಮಗಾರಿ ಹೆಸರಲ್ಲಿ ವಂಚನೆ?

1111
Published on

ಶ್ರೀನಿವಾಸಪುರ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ವಹಿಸಿರುವ ಕಾಮಗಾರಿ ಹೆಸರಿನಲ್ಲಿ ಗುತ್ತಿಗೆದಾರ ಅಕ್ರಮವಾಗಿ ಅನುದಾನ ಪಡೆದಿದ್ದಾರೆ ಎಂದು ನಾರಮಾಕಲಪಲ್ಲಿ ಗ್ರಾಮಸ್ಥರು ಆರೋಪಿಸಿದರು.

ಗ್ರಾಮದ ವೆಂಕಟರಾಮರೆಡ್ಡಿ, ಅನಿಲ್​ಕುಮಾರ್​, ಹರೀಶ್​ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ರೋಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯನಾರಮಾಕಲಪಲ್ಲಿಯಲ್ಲಿ 2021-&22ನೇ ಸಾಲಿನಲ್ಲಿ ಗ್ರಾಮದ ಅರಣ್ಯದಿಂದ ಕೆರೆವರೆಗಿನ ಕೆರೆ ಕಾಲುವೆ ಕಾಮಗಾರಿಯನ್ನು ನರೇಗಾ ಯೋಜನೆಯಲ್ಲಿ ನಿರ್ವಹಿಸಲಾಗಿತ್ತು. ಆದರೆ, ಈಗ ಕಾಮಗಾರಿ ನಿರ್ವಹಿಸದೆ ಹಳೇ ಕೆಲಸವನ್ನೇತೋರಿ ಗುತ್ತಿಗೆದಾರ ವಳಗೇರನಹಳ್ಳಿ ಶಿವಾರೆಡ್ಡಿ ಎಂಬುವರು 2024ರ ೆ.20 ರಂದು 5 ಲಕ್ಷ ರೂ.ಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಸಂಬಂಧಿತ ಅಧಿಕಾರಿಗಳು ಈ ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲನೆ ನಡೆಸಬೇಕು. ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಗುತ್ತಿಗೆದಾರನ ಪರವಾನಗಿ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net