ಹೂಡಿಕೆ ಹೆಸರಲ್ಲಿ ವಂಚನೆ

cybe crime
Published on

ಹುಬ್ಬಳ್ಳಿ: ಯುಬಿಎಸ್ ಗ್ರೂಪ್ ಎಲ್‌ನಲ್ಲಿ ಹಣ ಹೂಡಿಕೆ ಮಾಡಿ ಲಾಭ ಗಳಿಸಬಹುದೆಂದು ನಂಬಿಸಿದ ವಂಚಕರು, ಅಂಚೆ ಇಲಾಖೆ ನೌಕರರೊಬ್ಬರಿಂದ ಬರೋಬ್ಬರಿ 20.65 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ನಗರದ ಸದಾಶಿವ ಎಂಬುವವರ ವಂಚನೆಗೆ ಒಳಗಾದವರು. ವಾಟ್ಸ್ ಆ್ಯಪ್ ಗ್ರೂಪ್‌ಗೆ ಸದಾಶಿವ ಅವರನ್ನು ಸೇರಿಸಿದ ಅಕ್ಷತಾ, ಯಬಿಎಸ್ ಗ್ರೂಪ್ ಮತ್ತು ಯುಬಿಎಸ್ ಕಂಪನಿಗೆ ಸೇರಿಸಿದ್ದಾರೆ. ಮೊದಲು ಲಾಭದಾಸೆ ತೋರಿಸಿ ನಂತರ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net