ಗ್ಯಾರಂಟಿ ಹೆಸರಲ್ಲಿ ಮೋಸ: ಬಿ.ವೈ.ರಾಘವೇಂದ್ರ

mp B y Raghavendra
ಸಂಸದ ಬಿ.ವೈ.ರಾಘವೇಂದ್ರ
Published on

ಶಿವಮೊಗ್ಗ: ಮಧ್ಯಮ ಹಾಗೂ ಬಡ ವರ್ಗದ ದುಡಿದು ಜೀವಿಸುವ ಜನರಿಗೆ ಗ್ಯಾರಂಟಿ ಹೆಸರಿನಲ್ಲಿ ಮೋಸ ಮಾಡಲಾಗಿದೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳಿ, ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಇದರಿಂದ ಜನ ಆಕ್ರೋಶಗೊಂಡಿದ್ದಾರೆ. ಚುನಾವಣೆಯಲ್ಲಿ ಅವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದರು.
ಚುನಾವಣೆ ಸಮಯದಲ್ಲಿ ಕೌಟುಂಬಿಕವಾಗಿ ಹಾಗೂ ವೈಯಕ್ತಿಕ ಟೀಕೆಗಳು ಸಹಜವಾಗಿದ್ದು, ಇವೆಲ್ಲ ಜನರಿಗೆ ಮುಖ್ಯವಲ್ಲ. ಬದಲಾಗಿ ಜನರು ತಮ್ಮ ಭದ್ರತೆಯನ್ನು ಯಾರು ನೀಡುತ್ತಾರೆ ಎಂಬುದನ್ನು ಚಿಂತಿಸುತ್ತಾರೆ. ಚುನಾವಣಾ ಸಮಯದಲ್ಲಿನ ಯಾವುದೇ ಟೀಕೆಗಳಿಗೆ ಜನರು ಗಮನ ನೀಡುವುದಿಲ್ಲ ಎಂದರು.
ಪ್ರಮುಖವಾಗಿ ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣದ ವಿಚಾರದಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಜನರಿಗೆ ಬೇಕಿರುವುದು ತಮ್ಮ ಮಕ್ಕಳ ಭದ್ರತೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಮತದಾರರು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net