ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಂಚನೆ

cybe crime
Published on

ಹುಬ್ಬಳ್ಳಿ: ಸಿಬಿಐ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ ಅಪರಿಚಿತರು, ಧಾರವಾಡದ ಬಾರಾಕೋಟ್ರಿಯ ಮಹಿಳೆಯೊಬ್ಬರಿಂದ 30.10 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಮೊದಲು ಕೋರಿಯರ್ ಸಿಬ್ಬಂದಿಯೆಂದು ಕರೆ ಮಾಡಿ ಮಾತನಾಡಿದ ಅಪರಿಚಿತರು, ನಿಮ್ಮ ಹೆಸರಿನಲ್ಲಿ ಮುಬೈನಿಂದ ತೈವಾನ್‌ಗೆ ಪಾರ್ಸಲ್ ಕಳುಹಿಸುತ್ತಿದ್ದು, ಅದರಲ್ಲಿ ನರಕೋಟಿಕ್ ವಸ್ತುವಿದೆ. ಇದನ್ನು ಕಳಹಿಸುವುದು ಅಪರಾಧ. ಮುಂಬೈ ಸಿಬಿಐ ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸುತ್ತಾರೆ ಎಂದು ತಿಳಿಸಿದ್ದಾನೆ. ಬಳಿಕ ಸಿಬಿಐ ಅಧಿಕಾರಿ ಸೋಗಿನಲ್ಲಿ ಮಾತನಾಡಿದ ಇನೊಬ್ಬ ವ್ಯಕ್ತಿ, ಪೊಲೀಸ್ ಕಸ್ಟಡಿಗೆ ಒಳಪಡಬೇಕು ಹಾಗೂ ಅದೇ ರೀತಿ ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ನೀಡಬೇಕೆಂದಿದ್ದಾನೆ. ಮಾಹಿತಿ ಪಡೆದು ವಿವಿಧ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ಸಿಇಎನ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net