

ಮೈಸೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂಬ ಖಾಸಗಿ ಕಂಪನಿಯೊಂದರ ಸಲಹೆ ಮೇರೆಗೆ ಹೂಡಿಕೆ ಮಾಡಿದ ವೃದ್ಧರೊಬ್ಬರು 64 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಜಯಲಕ್ಷ್ಮೀಪುರಂ ನಿವಾಸಿ ರವಿರಾಮಚಂದ್ರನ್ (76) ಹಣ ಕಳೆದುಕೊಂಡವರು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಸಲುವಾಗಿ ರವಿರಾಮಚಂದ್ರನ್ ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ನಡೆಸಿದ್ದರು. ಈ ಸಂದರ್ಭ ಖಾಸಗಿ ಕಂಪೆನಿಯೊಂದು ನೀಡಿದ ಸಲಹೆಗೆ ಮೇರೆಗೆ 64,01,000 ರೂ. ಹಣವನ್ನು ಹಂತ ಹಂತವಾಗಿ ಹೂಡಿಕೆ ಮಾಡಿದ್ದರು. ಪ್ರಾರಂಭದಲ್ಲಿ 59,302 ರೂ. ಲಾಭ ಬಂದಿದ್ದು, ನಂತರ ಯಾವುದೇ ಲಾಭ ಬಂದಿಲ್ಲ. ಅಲ್ಲದೇ ಹೂಡಿಕೆ ಮಾಡಿದ ಹಣ ಕೂಡ ಕಳೆದುಕೊಂಡಿದ್ದಾರೆ. ನನಗೆ ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ವಂಚನೆಯಾಗಿದೆ ಎಂದು ರವಿರಾಮಚಂದ್ರನ್ ನೀಡಿದ ದೂರಿಗೆ ಮೇರೆಗೆ ಸೆನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಲಾಗಿದೆ.