

ಕಾರವಾರ: ಸದಾಶಿವಗಡದ ಜೈ ದುರ್ಗಾ ಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಲಿಂಗರಾಜ ಕಲ್ಗುಟಕರ್ ಹಾಗೂ ನಿರ್ದೇಶಕರನ್ನು ತಕ್ಷಣ ಬಂಽಸಿ ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ಅಕ್ಟೋಬರ್ 2 ರಂದು ಜಿಲ್ಲಾಽಕಾರಿ ಕಚೇರಿಯ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಗ್ರಾಹಕರು ಎಚ್ಚರಿಸಿದ್ದರು.
ಜೈ ದುರ್ಗಾ ಮಾತಾ ಕ್ರೆಡಿಟ್ ಸೌಹಾರ್ದದಲ್ಲಿ 54 ಕೋಟಿ ರೂ. ಅವ್ಯವಹಾರ ಮಾಡಿ, ಬ್ಯಾಂಕ್‌ನ ಅಧ್ಯಕ್ಷ ಲಿಂಗರಾಜ ಪುತ್ತು ಕಲ್ಗುಟಕರ್ ನಾಪತ್ತೆಯಾಗಿದ್ದಾನೆ. ಚಿತ್ತಾಕುಲಾ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ಸಿಐಡಿಗೆ ಹಸ್ತಾಂತರವಾಗಿದೆ. ಆದರೆ, ಇದರಿಂದ ಸುಮಾರು 600 ಗ್ರಾಹಕರು ಸಮಸ್ಯೆ ಅನುಭವಿಸುತ್ತಿದ್ದಾರೆ.
ದೂರು ದಾಖಲಾಗಿ ಹಲವು ತಿಂಗಳು ಕಳೆದರೂ ಅಧ್ಯಕ್ಷನ ಬಂಧನವಾಗಿಲ್ಲ. ಹಾಗಾಗಿ ಗ್ರಾಹಕರು ಆತಂಕದಲ್ಲಿದ್ದಾರೆ. ಹಾಗಾಗಿ ಕೂಡಲೇ ಲಿಂಗರಾಜ ಕಲ್ಗುಟಕರ್ ಹಾಗೂ ಸೌಹಾರ್ದ ಸಹಕಾರಿಯ ಎಲ್ಲ ನಿರ್ದೇಶಕರನ್ನು ಬಂಽಸಬೇಕು. ಹಾಗೂ ರಾಜ್ಯದಲ್ಲಿ ನಡೆಸಯುತ್ತಿರುವ ಸೊಸೈಟಿಗಳ ಮೇಲೆ ಕಣ್ಣಿಡಬೇಕು ಎಂದು ಒತ್ತಾಯಿಸಲಾಗಿದೆ.ಡಾ.ಗಜೇಂದ್ರ ನಾಯ್ಕ, ಸಾಯಿನಾಥ ಮೇತ್ರಿ, ಪ್ರಶಾಂತ ಆರ್.ನಾಯ್ಕ, ಗೀತಾ ಜಿ.ಗಡ್ಕರ್, ಅಂಜಲಿ ಬಾಂದೇಕರ್ ಇತರರು ಇದ್ದರು.