ಪಡಿತರ ವಿತರಣೆಯಲ್ಲಿ ವಂಚನೆ

24 MDL 03
ಪಡಿತರ ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಮುದಗಲ್ ಸಮೀಪದ ಮಟ್ಟೂರಿನಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈರಪ್ಪ ಬಳಗಾನೂರು, ಬಡೇಸಾಬ, ಸೋಮನಾಥ, ಸೋಮಣ್ಣ, ಯಲ್ಲಪ್ಪ ಭಜಂತ್ರಿ, ಶರಣಬಸವ, ಮೊನುದ್ದೀನ್ ಬನ್ನಿಗೋಳ ಇತರರಿದ್ದರು.
Published on

ಮುದಗಲ್: ಮಟ್ಟೂರು ಗ್ರಾಮದಲ್ಲಿ ತಿಂಗಳಲ್ಲಿ ಒಂದು ದಿನದ ಬದಲಿಗೆ 10 ದಿನ ಪಡಿತರ ಹಂಚಬೇಕೆಂದು ಆಗ್ರಹಿಸಿ ಪಡಿತರ ಚೀಟಿದಾರರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಅಕ್ಕಿ ವಿತರಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಪ್ರತಿ ಕಾರ್ಡಿಗೆ 2ರಿಂದ 4 ಕಿಲೋ ಅಕ್ಕಿ ನೀಡಲಾಗುತ್ತಿದೆ. ಪಡಿತರ ವಿತರಣೆ ವೇಳೆ ಪ್ರತಿ ಕಾರ್ಡಿಗೆ 10 ರೂ, ವಸೂಲಿ ಮಾಡಲಾಗುತ್ತಿದೆ. ಗ್ರಾಮದಲ್ಲಿ 1200ಕ್ಕಿಂತ ಹೆಚ್ಚು ಪಡಿತರ ಕಾರ್ಡ್‌ಗಳು ಇವೆ. ಆದರೆ, ಒಂದೇ ದಿನ ಪಡಿತರ ಹಂಚಿಕೆ ಮಾಡಲಾಗುತ್ತಿದೆ. ಮರುದಿನ ಹೋದರೆ ಅಕ್ಕಿ ಇಲ್ಲ ಎಂದು ಹೇಳಿ ವಾಪಸ್ ಕಳಿಸಲಾಗುತ್ತಿದೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net