ಭರತನಾಟ್ಯದ ವಸ್ತ್ರ ನೀಡದ ವಂಚನೆ: ದೂರು ದಾಖಲು

Published on

ಮೈಸೂರು:  ಭರತನಾಟ್ಯದ ವಸ್ತ್ರ ಕೊಡುವುದಾಗಿ ಹೇಳಿದ ಕೇರಳದ ಕೊಟ್ಟಾಯಂ ಜಿಲ್ಲೆಯ ಸುರೇಶ್‌ಕುಮಾರ್, ಪಾರ್ವತಿ ಸುರೇಶ್ ವಂಚನೆ ಮಾಡಿದ್ದಾರೆ ಎಂದು ಮೈಸೂರಿನ ದೀಪ ಫಾನ್ಸಿ ಡ್ರಸ್ಟ್‌ನ ರಮೇಶ್‌ಬಾಬು ಪೊಲೀಸರಿಗೆ ದೂರು ನೀಡಿದ್ದಾರೆ.

ಇನ್ಟ್ರಾಗ್ರಾಂ, ಫೇಸ್‌ಬುಕ್‌ನಲ್ಲಿ ಭರತನಾಟ್ಯ ವಸ್ತ್ರ ಸಿದ್ಧಪಡಿಸಿಕೊಡುತ್ತೇವೆ ಎಂದು ಮಾಹಿತಿ ನೀಡಿದ್ದರು. ಅದರಲ್ಲಿ ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ನಾನು ಕರೆ ಮಾಡಿ, 5 ಜೊತೆ ಭರತನಾಟ್ಯ ವಸ್ತ್ರ ಬೇಕು ಎಂದು ಹೇಳಿ 14 ಸಾವಿರ ಗೂಗಲ್ ಪೇ ಮಾಡಿದ್ದೇನೆ. ಒಂದು ವಾರದಲ್ಲಿ ಬಟ್ಟೆ ನೀಡುವುದಾಗಿ ಹೇಳಿದ್ದರೂ ಎರಡು ತಿಂಗಳು ಕಳೆದರೂ ಬಟ್ಟೆ ನೀಡಿಲ್ಲ. ಪೋನ್ ಕೂಡ ತೆಗೆಯದಿದ್ದರಿಂದ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ವಾಯ್ಸ ಮೇಸೆಜ್ ಕಳುಹಿಸಿದ್ದರಿಂದ ಕರೆ ಮಾಡಿದ ದಂಪತಿ, ಧಮ್ಕಿ ಹಾಕಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಂತಿಮವಾಗಿ ಒಂದು ಪಾರ್ಸೆಲ್ ಕಳುಹಿಸಿದ್ದು, ಅದರಲ್ಲಿ ಇರುವ ಬಟ್ಟೆಯು ತೀರ ಕಳಪೆ, ಪೂರ್ಣ ಫೀನಿಶಿಂಗ್ ಇಲ್ಲ. ಆದ್ದರಿಂದ ವಂಚನೆ ಎಸಗಿರುವ ಸುರೇಶ್‌ಕುಮಾರ್, ಪಾರ್ವತಿ ಸುರೇಶ್‌ಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೇವರಾಜ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net