2 ಕೆಜಿ ಬಂಗಾರ ಹೂಡಿಕೆ ಮಾಡಿಸಿಕೊಂಡು ವಂಚನೆ

gold
Published on

ಕಾರವಾರ: ಅತಿ ಹೆಚ್ಚು ಲಾಭಾಂಶ ಕೊಡುವುದಾಗಿ ಸುಮಾರು 2 ಕೆಜಿ ಬಂಗಾರವನ್ನು ತೊಡಗಿಸಿಕೊಂಡು ಮೋಸ ಮಾಡಿದ ಘಟನೆ ಭಟ್ಕಳದಲ್ಲಿ ನಡೆದಿದ್ದು, ಈ ಸಂಬಂಧ ಕಾರವಾರ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಭಟ್ಕಳದ ಕಾರಗದ್ದೆಯ ಅಬ್ದುಲ್ ರಹೀಂ ಸಾಹೇಬ್ ಖತೀಬ್, ನವಾಯತ ಕಾಲನಿ ತಂಜೀಂ ರಸ್ತೆಯ ಅಲಿ ಮೊಮಿನ್ ವಿರುದ್ಧ ಕೋಟೆಶ್ವರ ರಸ್ತೆಯ ಉದ್ಯಮಿ ಅಬ್ದುಲ್ ಸಲಾಂ ಅಬ್ದುಲ್ ಗಫಾರ್ ರುಕ್ನಿದ್ದೀನ್ ದೂರು ನೀಡಿದ್ದಾರೆ. ಕುಂದಾಪುರದಲ್ಲಿ ತಮ್ಮ ಗೋಲ್ಡ್ ಜ್ಯುವೆಲರ್ಸ್ ಎಂಬ ಬಂಗಾರದ ಅಂಗಡಿ ಪ್ರಾರಂಭವಾಗಿದ್ದು, ಅಲ್ಲಿ ಬಂಗಾರ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 45 ರಿಂದ 70 ಸಾವಿರ ರೂ. ಲಾಭಾಂಶ ನೀಡುವುದಾಗಿ ನಂಬಿಸಿದ್ದರು.

ಅಬ್ದುಲ್ ಸಲಾಂ ಅಬ್ದುಲ್ ಗಫಾರ್ ರುಕ್ನಿದ್ದೀನ್ ತಾವು ಒಂದು ಕೆಜಿ ಹಾಗೂ ಗೆಳೆಯನಿಂದ 1 ಕೆಜಿ ಹೂಡಿಕೆ ಮಾಡಿಸಿದ್ದರು. ಪ್ರಾರಂಭದ ಒಂದುವರೆ ವರ್ಷ ತಲಾ 8.10 ಲಕ್ಷ ರೂ.ಲಾಭಾಂಶ ನೀಡಿದರು. ನಂತರ ಲಾಭವನ್ನೂ ಹೂಡಿಕೆ ಮಾಡಿದ ಬಂಗಾರವನ್ನೂ ನೀಡದೇ ಮೋಸ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net