ಠೇವಣಿ ಮರಳಿಸದ ಸಹಕಾರ ಸಂಘಕ್ಕೆ ದಂಡ

Gavel on desk. Isolated with good copy space. Dramatic lighting.
Gavel on desk. Isolated with good copy space. Dramatic lighting.
Published on

ಕಾರವಾರ: ಅವಧಿ ಪೂರ್ಣಗೊಂಡರೂ ಠೇವಣಿ ಹಣ ಮರಳಿಸದ ಸದಾಶಿವಗಡದ ಆಶ್ರಯ ಪತ್ತಿನ ಸಹಕಾರ ಸಂಘಕ್ಕೆ 25 ಸಾವಿರ ದಂಡ ವಿಧಿಸಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಠೇವಣಿ ಹಣವನ್ನು ಶೇ.9.5 ರ ಬಡ್ಡಿ ಹಣದಲ್ಲಿ ಮರಳಿಸುವಂತೆ ಆದೇಶ ಮಾಡಿದೆ.

ಸಂಘದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು, ಈ ಸಂಬಂಧ ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿದೆ. ಇದೇ ಸೊಸೈಟಿಯ ವಿರುದ್ಧ ಈ ಹಿಂದೆ ಗ್ರಾಹಕರ ಪರಿಹಾರ ಆಯೋಗವು ತೀರ್ಪು ಪ್ರಕಟಿಸಿತ್ತು. ಈ ಗ್ರಾಹಕರ ಠೇವಣಿ ಹಣ ಪಾವತಿಸುವಲ್ಲಿ ಕೇವಲ ಸೊಸೈಟಿಯ ನೌಕರರು ಮಾತ್ರ ಜವಾಬ್ದಾರರಲ್ಲ, ಅಧ್ಯಕ್ಷ ನಿರ್ದೇಶಕರೂ ಜವಾಬ್ದಾರರು ಎಂದು ಈ ಹಿಂದೆ ಆಯೋಗವು ಆದೇಶ ಮಾಡಿತ್ತು.

ಪ್ರಕರಣದ ಹಿನ್ನೆಲೆ:

ಕಾರವಾರದ ಕೋಡಿಬಾಗ ನಿವಾಸಿಯಾದ ದಿನಕರ ನಾಗಪ್ಪ ನಾಯ್ಕ ಎಂಬ ಹಿರಿಯ ನಾಗರಿಕರೊಬ್ಬರು ತಮ್ಮ ನಿವೃತ್ತಿ ಸಮುದಲ್ಲಿ ಸಿಕ್ಕ ಹಣವನ್ನು ಸೇರಿಸಿ ಆಶ್ರಯ ಪತ್ತಿನ ಸಹಕಾರಿ ಸಂಘದಲ್ಲಿ 3 ಪ್ರತ್ಯೇಕ ಠೇವಣಿ ಇರಿಸಿದ್ದರು. ಹಣ ಪಕ್ವಗೊಂಡ ನಂತರ ದೂರುದಾರರಿಗೆ ನೀಡದೇ ಎದುರುದಾರರ ಸೇವಾ ನ್ಯೂನತೆ ಹಾಗೂ ಅನುಚಿತ ವ್ಯಾಪರ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಗ್ರಾಹಕರು ದೂರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ ಆಯೋಗದ ಪ್ರಭಾರ ಅಧ್ಯಕ್ಷ ಡಾ.ಮಂಜುನಾಥ ಎಂ.ಬಮ್ಮನಕಟ್ಟಿ ಹಾಗೂ ಸದಸ್ಯೆ ನೈನಾ ಕಾಮಟೆ ಅವರು ತೀರ್ಪು ಪ್ರಕಟಿಸಿದ್ದಾರೆ. 3 ಠೇವಣಿಗಳ ಮೊತ್ತ ರೂ.4.96 ಲಕ್ಷ ರೂ.ಗಳನ್ನು ಆಯಾ ಮೊತ್ತ ಪಕ್ವಗೊಂಡ ದಿನಾಂಕದಿAದ ವಾರ್ಷಿಕ ಶೇ.9.5 ರ ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಆದೇಶಿಸಿದ್ದಾರೆ. 20 ಸಾವಿರ ರೂ.ಗಳ ಗಳ ಮಾನಸಿಕ ಹಿಂಸೆಯ ಪರಿಹಾರವಾಗಿ ಹಾಗೂ ಪ್ರಕರಣದ ಖರ್ಚು ವೆಚ್ಚಕ್ಕಾಗಿ ಹಾಗೂ 5 ಸಾವಿರ ರೂ.ಗಳನ್ನು ಗಳನ್ನು ನೀಡುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಕಂಪನಿಗೆ ದಂಡ

ಮೊಬೈಲ್ ಟವರ್ ಸ್ಥಾಪನೆ ಮಾಡಿ ಜಾಗ ಮಾಲೀಕನಿಗೆ ಅದರ ಬಾಡಿಗೆ ಹಣ ನೀಡದ ಕಂಪನಿಗೆ 5 ಸಾವಿರ ರೂ. ದಂಡ ವಿಽಸಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗವು ಅದನ್ನು ದೂರುದಾರರಿಗೆ ಪಾವತಿಸುವಂತೆ ಸೂಚಿಸಿದೆ.

ಹೊನ್ನಾವರ ಕಾಸರಕೋಡಿನ ವಿಠ್ಠಲ ಗಾಯಗೊಂಡೆ ಹಾಗೂ ವೈಕುಂಠ ವಿಠ್ಠಲ ಗಾಯಗೊಂಡೆ ಅವರು ಜಿಟಿಎಲ್ ಇನ್‌ಫ್ರಾಸ್ಟçಕ್ಚರ್ ಸಂಸ್ಥೆಯೊಂದಿಗೆ ಮೊಬೈಲ್ ಟವರ್ ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಂಡಿದ್ದರು. ಕಂಪನಿಯು ಮಾಸಿಕ 3 ಸಾವಿರ ಬಾಡಿಗೆ ನೀಡುವುದಾಗಿ ತಿಳಿಸಿತ್ತು. ಆದರೆ, ಹಲವು ತಿಂಗಳಾದರೂ ಬಾಡಿಗೆ ನೀಡದೇ ಟವರ್ ಸಾಮಗ್ರಿಗಳನ್ನು ಖಾಲಿ ಮಾಡದ ಕಾರಣ ಅವರು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.

ಕಂಪನಿಯು ಬಾಡಿಗೆ ಮೊತ್ತ 5.32 ಲಕ್ಷ ರೂ.ಗಳನ್ನು ಶೇ.8 ರ ಬಡ್ಡಿಯೊಂದಿಗೆ ಪಾವತಿ ಮಾಡಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ಮಾಡಿದೆ. ಅಲ್ಲದೇ ಪ್ರಕರಣದ ಖರ್ಚು ವೆಚ್ಚಕ್ಕಾಗಿ 5 ಸಾವಿರ ರೂ. ನೀಡುವಂತೆ ಆದೇಶ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net