ಪೊಲೀಸ್ ಠಾಣೆ ಮೆಟ್ಟಲೇರಿದ ವಂಚನೆ ಪ್ರಕರಣ

13-KGL-5
ಕೊಳ್ಳೇಗಾಲದ ಪೊಲೀಸ್ ಠಾಣೆಗೆ ವಂಚನೆಗೊಳಾಗದವರು ಭೇಟಿ ನೀಡಿರುವುದು.
Published on

ಕೊಳ್ಳೇಗಾಲ: ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಟ್ರಸ್ಟ್ ಹೆಸರಿನ ಸಂಸ್ಥೆಯೊಂದು ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಲವರಿಂದ ಹಣ ಪಡೆದು ವಂಚಿಸಿದ್ದಾರೆ ಎನ್ನಲಾದ ವಿಚಾರ ಪೊಲೀಸ್ ಠಾಣೆ ಮೆಟ್ಟಲೇರಿದೆ.

ಸಂಸ್ಥೆಯು ಸರ್ಕಾರಿ ಶಾಲೆಗಳಲ್ಲಿ ಯೋಗ, ಗಣಕಯಂತ್ರ ಶಿಕ್ಷಕರು ಮತ್ತು ಗುಮಾಸ್ತರ ಕೆಲಸ ಕೊಡಿಸುತ್ತೇವೆ ಎಂದು ಹಲವರಿಂದ ಲಕ್ಷಾಂತರ ರೂ. ಹಣ ಪಡೆದು ಮೋಸ ವಸಗಿದ್ದಾರೆ ಎಂದು ವಂಚನೆಗೊಳಗಾದ ಮಹಿಳೆಯರು ವಾರದ ಹಿಂದಷ್ಟೇ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ವಂಚನೆಗೊಳಗಾದವರು ಶನಿವಾರ ಮತ್ತೆ ಡಿವೈಎಸ್ಪಿ ಕಚೇರಿಯಲ್ಲಿದ್ದ ಐಎಸ್‌ಐ ಮಹದೇವಸ್ವಾಮಿ ಅವರ ಬಳಿ ತೆರಳಿ ಅಳಲು ತೋಡಿಕೊಂಡಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಯೋಗ, ಗಣಕಯಂತ್ರ ಶಿಕ್ಷಕರು ಹಾಗೂ ಗುಮಾಸ್ತರ ಹುದ್ದೆಗಳಿಗೆ ತರಬೇತಿ ಕೊಡಿಸಿ ನೇಮಕ ಮಾಡಿಕೊಳ್ಳುತ್ತೇವೆ ಎಂದು ಚಾಮರಾಜನಗರ ಜಿಲ್ಲೆ ಮತ್ತು ಮೈಸೂರು ಜಿಲ್ಲೆಯಿಂದ ನೂರಕ್ಕೂ ಹೆಚ್ಚು ಯುವಕ, ಯುವತಿಯರಿಂದ ತಲಾ 1 ಲಕ್ಷ ದಿಂದ 2 ಲಕ್ಷದ ವರೆಗೂ ಹಣ ಪಡೆದಿದ್ದಾರೆ. ಅಂತೆಯೇ, ಶಾಲೆಗಳಲ್ಲಿ 5ರಿಂದ 6 ತಿಂಗಳ ಕೆಲಸ ನಿರ್ವಹಿಸಿದ್ದರೂ ಸಂಬಳ ನೀಡಿಲ್ಲ. ಇದರ ಬಗ್ಗೆ ಸಂಬಂಧಪಟ್ಟ ಸಂಸ್ಥೆಗೆ ಸೇರಿದವರನ್ನು ವತಿಯಿಂದ ನಮಗೆ ಹಣ ವಾಪಾಸ್ ನೀಡುವಂತೆ ಒತ್ತಾಯಿಸಿದರು ನೀಡದೆ ಮೋಸ ಮಾಡುತ್ತಿದ್ದಾರೆ ಎಂದು ಲಿಖಿತ ದೂರು ನೀಡಿದರು.

ಈ ವೇಳೆ ಉದ್ಯೋಗ ನೀಡುತ್ತೇವೆಂದು ಹಣ ಪಡೆದವರು ಎನ್ನಲಾದ ಕೆಲವರನ್ನು ಪೊಲೀಸರು ಕರೆಸಿ ವಿಚಾರಣೆ ನಡೆಸಿ ಹಣ ನೀಡುವಂತೆ ತಿಳಿಸಿ ಮುಂದಿನ ಕ್ರಮ ಕೈ ಗೊಂಡಿದ್ದಾರೆ.

ಈ ವೇಳೆ ರೈತ ಮುಖಂಡ ಅಣಗಳ್ಳಿ ಬಸವರಾಜು, ವಂಚನೆಗೊಳಗಾದ ವಿ.ಸೀಮಾ, ಎನ್.ಐಶ್ವರ್ಯಾ, ಡಿ.ಜ್ಯೋತಿ, ಎಸ್.ರಾಧಾ, ಪ್ರೇಮಾವತಿ, ಪಿ.ಸ್ಫೂರ್ತಿ, ವಿ.ಲಕ್ಷ್ಮೀ, ಮಾದೇವ, ದೀಪಿಕಾ, ಶಾರದಾ, ಸುಧಾ, ಪವಿತ್ರಾ, ಸಿ.ಸುನೀಲ್, ಪವಿತ್ರಾ, ಪುಟ್ಟ ರಾಜು, ಬಾನುಮತಿ, ದೊರೆರಾಜು, ರಾಧಾ, ಅನಿಲ್, ಕೆ.ಶ್ರೀಧರ್, ನಂದೀಶ್, ಹೇಮಂತ್, ಪವಿತ್ರಾ, ಲಲಿತಾ, ರಾಧಿಕಾ ಇದ್ದರು .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net