ಕಾಂಗ್ರೆಸ್ ಮುಖಂಡನ ವಿರುದ್ಧ ವಂಚನೆ ಪ್ರಕರಣ

Fraud case against Congress leader
ಹಾರೂನ್ ಸಾಂಗ್ಲಿಕರ
Published on

ರಬಕವಿ/ಬನಹಟ್ಟಿ: ತೇರದಾಳ ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಬನಹಟ್ಟಿಯ ಹಾರೂನ್ ಸಾಂಗ್ಲಿಕರ ವಿರುದ್ಧ ವಂಚನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ರಬಕವಿಯ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಬನಹಟ್ಟಿಯ ಅಂಜುಮನ್ ಎ-ಇಸ್ಲಾಂ ಕಮಿಟಿ ಹೆಸರಿನಲ್ಲಿ ಖಾತೆ ಹೊಂದಿದ್ದು, ಅಧ್ಯಕ್ಷ ಸ್ಥಾನ ಮುಕ್ತಾಯಗೊಂಡ ನಂತರವೂ ಬ್ಯಾಂಕ್‌ನಿಂದ ಅ.24 ಹಾಗೂ 28 ರಂದು 10 ಸಾವಿರ ಮತ್ತು 25 ಸಾವಿರ ರೂ. ಬಟವಡೆ ಮಾಡಿಕೊಂಡಿದ್ದರು. ಈ ಕುರಿತು ಕಮಿಟಿ ಹಾಲಿ ಅಧ್ಯಕ್ಷ ಬುಡಾನಸಾಬ(ಹಿರಾಹ್ಮನ್) ಜಮಾದಾರ ಪ್ರಕರಣ ದಾಖಲಿಸಿದ್ದಾರೆ.

ಪಿಎಸ್‌ಐ ಪಾಂಡುರಂಗ ಪೂಜಾರಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net