ಮೈಸೂರು: ಬ್ಯಾಂಕಿನ ನಿರ್ದೇಶಕನ ಸಹಿ ನಕಲು ಮಾಡಿ ಸಾಲ ನೀಡಲಾಗಿದೆ ಎಂದು ಆರೋಪಿಸಿ ದಿ ಸಿಟಿ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ, ನಿರ್ದೇಶಕರು ಸೇರಿದಂತೆ ಆರು ಜನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಬ್ಯಾಂಕಿನ ಅಧ್ಯಕ್ಷ ಎಂ.ಎನ್.ಸ್ವರೂಪ್, ಉಪಾಧಕ್ಷ ಎಸ್.ಸ್ವಾಮಿ, ಮಾಜಿ ಉಪಾಧ್ಯಕ್ಷ ಕುರುಬಾರಹಳ್ಳಿ ಪ್ರಕಾಶ್, ಪ್ರಭಾರ ವ್ಯವಸ್ಥಾಪಕ ಎಚ್.ರಾಜಶೇಖರ ಮತ್ತು ಸಾಲ ಪಡೆದ ಕೋಮಲಾ, ಪ್ರೇಮಾ ವಿರುದ್ಧ ಬ್ಯಾಂಕಿನ ನಿರ್ದೇಶಕ ಎಂ.ಕೆ.ಅಶೋಕ್ ದೂರು ನೀಡಿದ್ದಾರೆ.
ಕೋಮಲಾ ಮತ್ತು ಪ್ರೇಮಾ ಬ್ಯಾಂಕಿನಲ್ಲಿ 90 ಲಕ್ಷ ರೂ. ಸಾಲಕ್ಕೆ ಅರ್ಜಿ ಸಲ್ಲಿಸಿದ್ದು, ಅಧ್ಯಕ್ಷರು ಸೇರಿದಂತೆ ನಿರ್ದೇಶಕರು ಮತ್ತು ಮ್ಯಾನೇಜರ್ ಸಾಲ ಮಂಜುರಾತಿಯ ಬಗ್ಗೆ ನಿರ್ದೇಶಕರ ಗಮನಕ್ಕೆ ತಾರದೇ ನನ್ನ ಸಹಿಯನ್ನು ನಕಲು ಮಾಡಿ ಸಾಲವನ್ನು ಕೊಡಿಸುವ ಮೂಲಕ ಬ್ಯಾಂಕಿಗೆ ವಂಚನೆ ಮಾಡಿದ್ದಾರೆ ಎಂದು ಬ್ಯಾಂಕಿನ ನಿರ್ದೇಶಕ ಅಶೋಕ್ ದೂರಿನಲ್ಲಿ ಆರೋಪಿಸಿದ್ದು, ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.