ಲಾಟರಿ ಬಹುಮಾನಕ್ಕೆ 2 ಲಕ್ಷ ರೂ. ಕಳೆದುಕೊಂಡ ಬೆಳ್ಮಣ್ ಯುವಕ !

fraud
Published on

ಉಡುಪಿ: ಲಾಟರಿ ಹಣ ಗೆದ್ದಿರುವ ಸುಳ್ಳು ಮೊಬೈಲ್ ಸಂದೇಶವನ್ನು ನಂಬಿ ಬೆಳ್ಮಣ್‌ನ ಯುವಕನೊಬ್ಬ 2 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಬೆಳ್ಮಣ್, ಪುನಾರ್ ನಿವಾಸಿ ಸುಜಿತ್ ಪ್ರಭು (19) ಹಣ ಕಳೆದುಕೊಂಡವರು. ಸೆ.4 ರಂದು ಸುಜಿತ್‌ಗೆ 12,18,095 ರೂ. ಹಣದ ಲಾಟರಿ ಗೆದ್ದಿರುವುದಾಗಿ ಮೊಬೈಲ್ ಗೆ ಮೆಸೇಜ್ ಬಂದಿದೆ.

ಮತ್ತೊಬ್ಬ ವ್ಯಕ್ತಿ ಲಾಟರಿ ಹಣವನ್ನು 17,400 ಡಾಲರ್ ಹಣವನ್ನು ರೂಪಾಯಿಗೆ ವರ್ಗಾವಣೆ ಮಾಡಲು ರೂಪಾಯಿ 6,500 ರೂ. ಕಟ್ಟ ಬೇಕು ಎಂದು ಹೇಳಿ ಬ್ಯಾಂಕ್ ಖಾತೆ ವಿವರ ನೀಡಿದ್ದಾನೆ.

ಲಾಟರಿ ಹಣವನ್ನು ನೀಡಲು ಬೇರೆ ಬೇರೆ ಕಾರಣಗಳನ್ನು ನೀಡಿ ಹಂತಹಂತವಾಗಿ 2,05,500 ರೂ. ಹಣವನ್ನು ಬರೋಡಾ ಬ್ಯಾಂಕಿನ ಮೊಬೈಲ್ ಆ್ಯಪ್ ಮೂಲಕ ಡಿಪಾಸಿಟ್ ಮಾಡಿಸಿಕೊಂಡು ಯುವಕನಿಗೆ ವಂಚಿಸಿದ್ದಾರೆ. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net