21 ಲಕ್ಷ ರೂ. ಪಡೆದು ವಂಚಿಸಿದಾತ ಅಂದರ್

Fraud
Published on

ಕಾಸರಗೋಡು: ಸಾಮಾಜಿಕ ಜಾಲತಾಣದ ಮೂಲಕ ಷೇರ್ ಮಾರ್ಕೆಟ್‌ಗೆ ಸಂಬಂಧಿಸಿದ ತರಗತಿ ನಡೆಸಿ, ಇದಕ್ಕಾಗಿ ವಿವಿಧ ನೆಪವೊಡ್ಡಿ ವಲಿಯಪರಂಬ ಇಡಯಿಲಕ್ಕಾಡಿನ ವ್ಯಕ್ತಿಯೊಬ್ಬರಿಂದ 20.13 ಲಕ್ಷ ರೂ. ಪಡೆದು ವಂಚಿಸಿದ ಆಲಪ್ಪುಳ ಕಾರೂರ್ ನಿವಾಸಿ ಜಿ.ಬಿಜುಕುಮಾರ್ ಎಂಬಾತನನ್ನು ಕಾಸರಗೋಡು ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತ ವಂಚಿಸಿದ ಮೊತ್ತದಲ್ಲಿ ಮೂರು ಲಕ್ಷ ರೂ. ಈತನ ಮಾಲೀಕತ್ವದ ಸಂಸ್ಥೆಯೊಂದರ ಹೆಸರಿನ ಆಲಪ್ಪುಳದ ಖಾಸಗಿ ಬ್ಯಾಂಕ್‌ಗೆ ಪಾವತಿಯಾಗಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಐಬಿಪಿಐ ಎಂಬ ಆನ್‌ಲೈನ್ ಆ್ಯಪ್ ಮೂಲಕ ಶೇರ್ ಟ್ರೇಡಿಂಗ್ ನಡೆಸುವ ಸಂಸ್ಥೆ ಹೆಸರಲ್ಲಿ ಹಲವರಿಂದ ಹಣ ಪಡೆದು ವಂಚಿಸಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ.ವಿಜಯಭರತ್ ರೆಡ್ಡಿ ಅವರ ನಿರ್ದೇಶನ ಪ್ರಕಾರ ಕಾಸರಗೋಡು ಸೈಬರ್ ಕ್ರೈಂ ಪೊಲೀಸ್ ಠಾಣೆ ಉಸ್ತುವಾರಿಯಲ್ಲಿರುವ ಯು.ಪಿ.ವಿಪಿನ್, ಎಸ್‌ಐ ರವೀಂದ್ರನ್ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳಿದ್ದು, ಇತರರಿಗಾಗಿ ಹುಡುಕಾಟ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net