ಯುವತಿ ಮಾತು ನಂಬಿ 3.50 ಲಕ್ಷ ರೂ. ಕಳಕೊಂಡ ಪಡುಬಿದ್ರಿ ವ್ಯಕ್ತಿ!

fraud
Published on

ಉಡುಪಿ: ಫೇಸ್‌ಬುಕ್‌ನಲ್ಲಿ 3 ದಿನಗಳ ಹಿಂದಷ್ಟೇ ಪರಿಚಯವಾದ ಯುವತಿಯೊಬ್ಬಳ ಮಾತನ್ನು ನಂಬಿ ವ್ಯಕ್ತಿಯೊಬ್ಬರು 3.53 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಪಡುಬಿದ್ರಿ, ನಡ್ಸಾಲು ಗ್ರಾಮದ ಡೇವಿಡ್ ಪೌಲ್ ಕುಮಾರ್(53) ಹಣ ಕಳೆದುಕೊಂಡವರು. ಫೇಸ್‌ಬುಕ್‌ನಲ್ಲಿ 24ರಂದು ಜೊನ್ ಶರ್ರಿ ಮಾರ್ಕ್ಸ್‌ವೆಲ್ ಎಂಬಾಕೆಯ ಪರಿಚಯವಾಗಿತ್ತು.

ಹುಟ್ಟುಹಬ್ಬಕ್ಕೆ ಬೆಲೆಬಾಳುವ ಗಿಫ್ಟ್ ಪಾರ್ಸೆಲ್ ಕಳುಹಿಸುವುದಾಗಿ ಡೇವಿಡ್ಗೆ ಹೇಳಿದ್ದರು. ಅದರಂತೆ ದೆಹಲಿ ಏರ್‌ಪೋರ್ಟಿನಿಂದ ಮಹಿಳೆಯೊಬ್ಬರು ಕರೆ ಮಾಡಿ, ವಿದೇಶದಿಂದ ಪಾರ್ಸೆಲ್ ಬಂದಿದೆ.

ಕಳುಹಿಸಬೇಕಾದರೆ 3.53 ಲಕ್ಷ ರೂ.ಹಣ ವರ್ಗಾಯಿಸುವಂತೆ ಹೇಳಿದ್ದಾರೆ. ಹಣವನ್ನು ವರ್ಗಾಯಿಸಿದರೂ, ಪಾರ್ಸೆಲ್ ಕೈ ಸೇರಲಿಲ್ಲ. ವಂಚನೆ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net