ಮಹಿಳೆಗೆ 12 ಲಕ್ಷ ರೂ. ವಂಚನೆ

fraud call
Published on

ಉಡುಪಿ: ಮಲ್ಪಿ ಅಸೆಟ್​ ಪೋರ್ಟ್​ಪೋಲಿಯೋ ಬಗ್ಗೆ ಅಪರಿಚಿತನ ಮಾತು ನಂಬಿದ ಮಹಿಳೆಯೊಬ್ಬರು 12 ಲಕ್ಷ ರೂ. ಕಳೆದುಕೊಂಡಿದ್ದಾರೆ.

ವಿ.ಪಿ ನಗರ ನಿವಾಸಿ ಸುಪ್ರಜಾ ಟಿ.ಎ (34) ಅವರಿಗೆ ಅ. 27ರಂದು ಮೊಬೈಲ್​ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಹಣ ದ್ವಿಗುಣಗೊಳಿಸುವ ಬಗ್ಗೆ ಮಾಹಿತಿ ನೀಡಿದ್ದು, ಇದರಿಂದ ಉತ್ತೀಜಿತರಾದ ಅವರು ಮೂರು ಕಂತುಗಳಲ್ಲಿ ಎಸ್​.ಬಿ.ಐ ಖಾತೆಯಿಂದ ಒಟ್ಟು ರೂ 12,04,400 ರೂ. ವರ್ಗಾವಣೆ ಮಾಡಿದ್ದಾರೆ. ನಂತರ ಹಣ ಪಡೆದುಕೊಂಡ ವ್ಯಕ್ತಿಯು ಯಾವುದೇ ಮಾಹಿತಿಯನ್ನು ನೀಡದೇ, ಹಣವನ್ನು ವಾಪಾಸು ನೀಡದೇ ಮೊಬೈಲ್​ ನಂಬರ್​ ಸ್ವಿಚ್​ ಆಫ್​ ಮಾಡಿ ಮೋಸ ಮಾಡಿದ್ದಾನೆ ಎಂದು ಮಣಿಪಾಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net