38.28 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚನೆ

cybe crime
Published on

ಹುಬ್ಬಳ್ಳಿ: ಟಾಟಾ ಇನ್‌ವೆಸ್ಟ್‌ಮೆಂಟ್ ಹಾಗೂ ಮಾರ್ವಾಡಿ ಫೈನಾನ್ಸ್‌ನಲ್ಲಿ ಹೂಡಿಕೆ ಮಾಡಿಸುವ ನೆಪದಲ್ಲಿ ಧಾರವಾಡ ವ್ಯಕ್ತಿಯೊಬ್ಬರಿಂದ 38.28 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಲಾಗಿದೆ.
ಧಾರವಾಡದ ವಿಜಯಕುಮಾರ ಎಂಬುವವರು ವಂಚನೆಗೆ ಒಳಗಾದವರು. ಇವರಿಗೆ ಶುಭಾಂಗಿ ಅಗರವಾಲ್, ಅಮೇಲಿಯಾ ಎಂಬುವರು ವಂಚಿಸಿದ್ದಾರೆ. ಫೇಸಬುಕ್ ನೋಡುತ್ತಿದ್ದಾಗ ಹೂಡಿಕೆ ಹೆಸರಿನಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದಾಗ ವಾಟ್ಸ್ ಆ್ಯಪ್ ಗ್ರೂಪ್ ಒಂದಕ್ಕೆ ಸೇರಿಸಿ ಹಂತ ಹಂತಗಳಲ್ಲಿ 38,28,300 ರೂಪಾಯಿ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ವಿಜಯಕುಮಾರ, ಸಿಇಎನ್ ಕ್ರೈಂ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net