

ಹುಬ್ಬಳ್ಳಿ: ಲೈಕ್ಸ್ ಮತ್ತು ರೇಟಿಂಗ್ ನೀಡಿ ಹಣ ಗಳಿಸಿ ಎಂದು ನಂಬಿಸಿದ ವಂಚಕರು, ನವನಗರದ ಪ್ರದೀಪಗೌಡ ಎಂಬುವರಿಂದ 18.87 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಅಪರಿಚಿತರು ಪ್ರದೀಪಗೌಡ ಅವರ ಮೊಬೈಲ್ ಫೋನ್‌ಗೆ ಲಿಂಕ್ ಕಳುಹಿಸಿ ನಂಬಿಸಿದ್ದಾರೆ. ಮೊದಲು ಸ್ವಲ್ಪ ಲಾಭದಾಸೆ ತೋರಿಸಿದ್ದಾರೆ. ನಂತರ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಂದ 18,87,031 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.