

ಮೈಸೂರು: ನಕಲಿ ಕಸ್ಟಮರ್ ಕೇರ್ ಸಂಪರ್ಕದಿಂದ ನಗರದ ಮಹೇಶ್‌ಕುಮಾರ್ ಎಂಬುವರು 96 ಸಾವಿರ ರೂ. ಕಳೆದುಕೊಂಡಿದ್ದಾರೆ.
ಆನ್‌ಲೈನ್ ಮೂಲಕ ಚಪ್ಪಲಿ ಸ್ಟ್ಯಾಂಡ್ ತರಿಸಿಕೊಂಡಿದ್ದ ಮಹೇಶ್ ಕುಮಾರ್, ಗುಣಮಟ್ಟವಿಲ್ಲದ ಕಾರಣ ವಾಪಸ್ ಕಳುಹಿಸಲು ಕಂಪನಿಯ ಕಸ್ಟಮರ್ ಕೇರ್ ನಂಬರ್ ಹುಡುಕಿ ಕರೆ ಮಾಡಿದ್ದಾರೆ. ಆದರೆ ನಕಲಿ ಕಂಪನಿಗೆ ಕರೆ ಮಾಡಿದ್ದು, ಕರೆ ಸ್ವೀಕರಿಸಿದವರು ಹಣ ಕಳುಹಿಸುವುದಾಗಿ ಹೇಳಿ ಮಹೇಶ್ ಕುಮಾರ್ ಅವರ ಬ್ಯಾಂಕ್ ವಿವರ ಪಡೆದಿದ್ದಾರೆ. ಬಳಿಕ ಅದನ್ನು ಬಳಸಿಕೊಂಡು ಅವರ ಖಾತೆಯಿಂದ 96,115 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಮಹೇಶ್ ಕುಮಾರ್ ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.