ನೌಕರಿ ಕೊಡಿಸುವುದಾಗಿ ನಂಬಿಸಿ ವಂಚನೆ

cybe crime
Published on

ಹುಬ್ಬಳ್ಳಿ: ಏರ್‌ಲೈನ್ಸ್‌ನಲ್ಲಿ ಟಿಕೆಟ್ ಬುಕ್ಕಿಂಗ್ ನೌಕರಿ ಕೊಡಿಸುವುದಾಗಿ ನಂಬಿಸಿದ ಕಾವ್ಯ ಜಯರಾಜ್ ಎನ್ನುವ ಟೆಲಿಗ್ರಾಂ ಖಾತೆಯವರು, ಇಲ್ಲಿಯ ಸದಾಶಿವ ನಗರದ ರಿಚರ್ಡ್ ಎನ್ನುವರಿಂದ 2.67 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ರಿಚರ್ಡ್ ಆನ್‌ಲೈನ್‌ನಲ್ಲಿ ನೌಕರು ಹುಡುಕುತ್ತಿದ್ದರು. ಈ ವೇಳೆ ಕಾವ್ಯ ಹೆಸರಿನವರು ಟೆಲಿಗ್ರಾಂ ಖಾತೆಯಿಂದ ಮೆಸೇಜ್ ಮಾಡಿದ್ದರು. ನೌಕರಿ ಕೊಡಿಸುವ ವಿಶ್ವಾಸ ತುಂಬಿದರು. ಆ ಮೇಲೆ ವಿವಿಧ ಖಾತೆಗಳಿಂದ 2,67,173 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ರಿಚರ್ಡ್, ಕೇಶ್ವಾಪುರ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net