ಸಹಾಯ ನೆಪದಲ್ಲಿ ಅಪರಿಚಿತನಿಂದ ವಂಚನೆ

Huge Fraud
Published on

ಕೋಟ: ಸಾಸ್ತಾನದಲ್ಲಿ ಎಟಿಎಂನಿಂದ ಹಣ ಪಡೆಯುವಾಗ ಸಹಾಯ ಮಾಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವಂಚಿಸಿದ್ದಾನೆ. ಕೋಡಿ ಗ್ರಾಮದ ಚೆನ್ನಪ್ಪ (73) ಎಂಬುವರು ಅ.4ರಂದು ಬೆಳಗ್ಗೆ ಪಾಂಡೇಶ್ವರ ಗ್ರಾಮದ ಸಾಸ್ತಾನದ ಕರ್ಣಾಟಕ ಬ್ಯಾಂಕ್ ಎಟಿಎಂನಲ್ಲಿ ಹಣ ತೆಗೆಯಲು ಒಳಗೆ ಹೋಗಿ 1 ಸಾವಿರ ಹಣ ಡ್ರಾ ಮಾಡುತ್ತಿರುವಾಗ ಅದೇ ಸಮಯಕ್ಕೆ ಒಬ್ಬ ಅಪರಿಚಿತ ವ್ಯಕ್ತಿ ಎಟಿಎಂ ಒಳಗೆ ಪ್ರವೇಶಿಸಿ ಚೆನ್ನಪ್ಪ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಅವರಿಗೆ ತಿಳಿಯದ ಹಾಗೆ ಆತನ ಬಳಿ ಇರುವ ಎಟಿಎಂ ಕಾರ್ಡನ್ನು ಚೆನ್ನಪ್ಪಗೆ ನೀಡಿ, ಚೆನ್ನಪ್ಪನ ಬಳಿ ಇರುವ ಕಾರ್ಡನ್ನು ಆತ ತೆಗೆದುಕೊಂಡು ಮೋಸ ಮಾಡಿದ್ದಾನೆ. ಅ.7ರಂದು ಚೆನ್ನಪ್ಪರವರು ಹಣ ಡ್ರಾ ಮಾಡಲು ಹೋದಾಗ ಅವರ ಖಾತೆಯಲ್ಲಿ ಹಣ ಇರುವುದಿಲ್ಲ ಎಂದು ತೋರಿಸಿದಾಗ ಕೂಡಲೇ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಅವರ ಖಾತೆಯಿಂದ ಅ.4ರಿಂದ 6ರವರೆಗೆ ಸಾಲಿಗ್ರಾಮ, ಶಿವಮೊಗ್ಗ, ಕಾರ್ಗಲ್ ಹಾಗೂ ಗೋಕರ್ಣ ಕಡೆಗಳಲ್ಲಿ ಒಟ್ಟು 99,000 ರೂ. ಹಣ ಚೆನ್ನಪ್ಪರವರ ಖಾತೆಯಿಂದ ಅಪರಿಚಿತ ವ್ಯಕ್ತಿ ವಂಚಿಸಿ ಹಣ ಪಡೆದ ಬಗ್ಗೆ ಬೆಳಕಿಗೆ ಬಂದಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net