ಟೆಲಿಗ್ರಾಂ ಲಿಂಕ್‌ ನೋಡಿ ಹೂಡಿಕೆ ಮಾಡಿ 23.95 ಲಕ್ಷ ರೂ. ಕಳೆದುಕೊಂಡ ಮಹಿಳೆ

cyber crime (1)
Published on

ಕಾರವಾರ: ಟೆಲಿಗ್ರಾಂನಲ್ಲಿ ಬಂದ ಲಿಂಕ್ ನಂಬಿ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿದ ಮಹಿಳೆಯೊಬ್ಬಳು 23.95 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದ್ದು, ಕಾರವಾರದ ಸೈಬರ್ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒನ್ ಟ್ರಾವೆಲ್ ಇಂಡಿಯಾ ಎಂಬ ಕಂಪನಿಯ ಲಿಂಕ್ ಟೆಲಿಗ್ರಾಂನಲ್ಲಿ ಬಂದಿತ್ತು. ಕಾರವಾರ ಸುಂಕೇರಿಯ ಸಣ್ಣ ಮಸೀದಿ ಬಳಿಯ ನಿವಾಸಿ ಮಹಿಳೆಯೊಬ್ಬಳು ಮಗನಿಗೆ ತಿಳಿಸಿ ಆತನ ಮೂಲಕ ಮೊದಲು 10 ಸಾವಿರ ರೂ. ಹೂಡಿಕೆ ಮಾಡಿದ್ದಳು. ನಂತರ 25 ಸಾವಿರ ಹೂಡಿಕೆ ಮಾಡಿದ್ದರು. ಆಗ ಒಟ್ಟು 49,500 ರೂ. ಲಾಭಾಂಶ ಬ್ಯಾಂಕ್ ಖಾತೆಗೆ ಜಮಾ ಆಗಿತ್ತು. ಹೆಚ್ಚಿನ ಲಾಭದ ಆಸೆಗೆ ಇನ್ನಷ್ಟು ಹಣ ಹೂಡಿಕೆ ಮಾಡುತ್ತ ಹೋಗಿದ್ದರು ನಂತರ ಲಾಭಾಂಶವಾಗಲಿ, ಹೂಡಿಕೆ ಮಾಡಿದ ಹಣವೂ ಬಂದಿಲ್ಲ ಎಂದು ಸಿಇಎನ್ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net