ಕೇರಳದ ಉದ್ಯಮಿಯನ್ನು ಅಪಹರಿಸಿ 350 ಗ್ರಾಂ ಬಂಗಾರದ ಬಿಸ್ಕತ್‌ ದೋಚಿದ ದೋಚಿದ ಕಳ್ಳರು

fraud
Published on

ಕುಮಟಾ: ಕೇರಳದ ಉದ್ಯಮಿಯನ್ನು ಮಂಗಳೂರಿನಿಂದ ಕಾರಿನಲ್ಲಿ ಅಪರಹರಿಸಿಕೊಂಡು ಬಂದು ಲಕ್ಷಾಂತರ ರೂ. ಮೌಲ್ಯದ ಬಂಗಾರದ ಗಟ್ಟಿಯನ್ನು ದೋಚಿ ಕುಮಟಾ ಅಂತ್ರವಳ್ಳಿ ಬಳಿ ಬಿಟ್ಟು ಹೋದ ಘಟನೆ ನಡೆದಿದೆ.

ಮೂಲತಃ ಮಹಾರಾಷ್ಟ್ರ ಸಾಂಗ್ಲಿ ತಾಸಗಾಂವ ಜಿಲ್ಲೆಯ ಹಾಲಿ ಕೇರಳ ಕಾಸರಕೋಡು ಜಿಲ್ಲೆಯ ಕಾಂಜನಗಡ ತಾಲೂಕಿನಲ್ಲಿ ಜ್ಯೂವೆಲ್ಲರಿ ಶಾಪ್ ಹೊಂದಿರುವ ಹರಿ ಭಾನುದಾಸ ತೋರಾಟ್ ಕುಮಟಾ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಬುಧವಾರ ಬೆಳಗ್ಗೆ 7 ಗಂಟೆಗೆ ಸೆಂಟ್ರಲ್ ರೈಲ್ವೆ ನಿಲ್ದಾಣದ ಕೈರಾಲಿ ಹೋಟೆಲ್ ಬಳಿ ಆಟೋಗಾಗಿ ಕಾಯುತ್ತಿರುವಾಗ ಬಿಳಿ ಬಣ್ಣದ ಇನೋವಾ ಕಾರಿನಲ್ಲಿ ಬಂದ ಕೆಲವರು ತಾವು ಕಸ್ಟಮ್ಸ್ ಅಧಿಕಾರಿಗಳು ನಿಮ್ಮನ್ನು ಪರಿಶೀಲನೆ ಮಾಡಬೇಕು ಎಂದು ಬಲವಂತದಿಂದ ಹತ್ತಿಸಿಕೊಂಡು ಕರೆದುಕೊಂಡು ಬಂದರು. ತಮ್ಮ ಬಳಿ 35 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನದ ಘಟ್ಟಿಗಳಿದ್ದವು. ಅದನ್ನು ದೋಚಿಕೊಂಡು ತಮ್ಮನ್ನು ಅಂತ್ರವಳ್ಳಿ ಬಳಿ ಬಿಟ್ಟು ಪರಾರಿಯಾದರು ಎಂದು ಥೋರಾಟ್ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಕುಮಟಾ ಠಾಣೆಯ ಪೊಲೀಸರು ಪ್ರಕರಣವನ್ನು ಮಂಗಳೂರು ಶಹರ ಪಾಂಡೇಶ್ವರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net