ಆರೋಗ್ಯ ಶಿಕ್ಷಣಕ್ಕೆ ಫಾ.ಮುಲ್ಲರ್ ಸಂಸ್ಥೆ ಬದ್ಧತೆ : ಫಾ.ರಿಚರ್ಡ್ ಅಲೋಶಿಯಸ್ ಕೊಯೆಲ್ಹೊ

wwwwwwwwwwww
Published on



ಮಂಗಳೂರು : ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ ಆರೋಗ್ಯ ಶಿಕ್ಷಣಕ್ಕೆ ತನ್ನ ಬದ್ಧತೆಯನ್ನು ಹೊಂದಿದೆ. ನುರಿತ ವೈದ್ಯರು ಹಾಗೂ ಇತರ ಸಿಬ್ಬಂದಿ ಒಂದು ತಂಡವಾಗಿ ಕೆಲಸ ಮಾಡಿ ಉತ್ತಮ ಆರೋಗ್ಯ ಸೇವೆಯನ್ನು ನೀಡುತ್ತಾ ಬಂದಿದ್ದಾರೆ ಎಂದರು ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ನಿರ್ದೇಶಕ ಫಾ.ರಿಚರ್ಡ್ ಅಲೋಶಿಯಸ್ ಕೊಯೆಲ್ಹೊ ಹೇಳಿದರು.
ಫಾದರ್ ಮುಲ್ಲರ್ ಕಾಲೇಜ್ ಆಫ್ ಫಿಸಿಯೋಥೆರಪಿ 30 ವರ್ಷ ಪೂರೈಸಿದ ಅಂಗವಾಗಿ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ದೈಹಿಕ ಫಿಟ್‌ನೆಸ್ ಅಸೆಸ್‌ಮೆಂಟ್ ಮತ್ತು ಎಕ್ಸರ್ಸೈಸ್ ಪ್ರಿಸ್ಕ್ರಿಪ್ಷನ್ ಕುರಿತ ಎರಡು ದಿನಗಳ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಂ.ಎಸ್. ರಾಮಯ್ಯ ಕಾಲೇಜ್ ಆಫ್ ಫಿಸಿಯೋಥೆರಪಿಯ ಡಾ. ಸುಂದರ್ ಕುಮಾರ್ ವೇಲುಸಾಮಿ ಸಮಾವೇಶ ಉದ್ಘಾಟಿಸಿದರು.
ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್‌ಕೇರ್ ಕೌನ್ಸಿಲ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಡಾ.ಯು.ಟಿ. ಇಫ್ತಿಕಾರ್ ಫರೀದ್ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಫಾ. ಫೌಸ್ಟಿನ್ ಲೂಕಾಸ್ ಲೋಬೊ,ಫಾ. ಅಜಿತ್ ಬಿ.ಮಿನೇಜಸ್, ಫಾ. ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, ಡಾ.ಆಂಟನಿ ಸಿಲ್ವನ್ ಡಿಸೋಜಾ, ಡಾ. ಹಿಲ್ಡಾ ಫೆರ್ನಾಂಡಿಸ್‌ಮತ್ತು ಪ್ರೊ.ಚೆರಿಶ್ಮಾ ಡಿಸಿಲ್ವಾ ಉಪಸ್ಥಿತರಿದ್ದರು. ಫಿಸಿಯೋಥೆರಪಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶೀತಲ್ ವಿ ಪೈ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net