ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆಗೆ ಎನ್‌ಎಬಿಎಚ್ ಮಾನ್ಯತೆ

uuuuuuu
Published on




ಮಂಗಳೂರು : ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಯು ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಹಾಸ್ಪಿಟಲ್ಸ್ ಮತ್ತು ಹೆಲ್ತ್‌ಕೇರ್ ಪ್ರೊವೈಡರ್ಸ್ (ಎನ್‌ಎಬಿಎಚ್) ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಮಾನ್ಯತೆ ಪಡೆದಿದೆ. ಬಂಟ್ವಾಳ ತಾಲೂಕಿನಲ್ಲಿ ಈ ಮನ್ನಣೆ ಪಡೆದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಗೆ ಈ ಮಾನ್ಯತೆ ಮಹತ್ವದ ಮೈಲಿಗಲ್ಲು. ಆರೋಗ್ಯ ಸೇವೆಯ ಶ್ರೇಷ್ಠತೆ , ರೋಗಿಗಳ
ಸುರಕ್ಷತೆ ಮತ್ತು ಗುಣಮಟ್ಟದ ಸೇವೆಗೆ ಅಚಲವಾದ ಬದ್ಧತೆಗೆ ಮೀಸಲಾಗಿರುವ ಫಾದರ್ ಮುಲ್ಲರ್ ಆಸ್ಪತ್ರೆ, ತುಂಬೆ ನಿರಂತರವಾಗಿ
ವಿಕಸನಗೊಳ್ಳುತ್ತಿರುವ ಆರೋಗ್ಯ ರಕ್ಷಣೆಯ ಮಾನದಂಡವನ್ನು ಸ್ಥಾಪಿಸಿದೆ. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಘಟಕವಾಗಿ 2013ರಲ್ಲಿ ಸ್ಥಾಪನೆಯಾದ ಆಸ್ಪತ್ರೆಯು 100 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ .
ಬಂಟ್ವಾಳ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳ ಗ್ರಾಮೀಣ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತದೆ. 24/7 ಅಪಘಾತ ಸೇವೆಗಳು, ಆಪರೇಷನ್ ಥಿಯೇಟರ್‌ಗಳು, ಡಯಾಲಿಸಿಸ್ ಮತ್ತು ಫಾರ್ಮಸಿ ಸೌಲಭ್ಯಗಳನ್ನು ಒಳಗೊಂಡಂತೆ ಅತ್ಯಾಧುನಿಕ
ಸೌಲಭ್ಯಗಳನ್ನು ಹೊಂದಿದೆ . ವೈದ್ಯರು, ದಾದಿಯರು ಮತ್ತು ಸಹಾಯಕ ಸಿಬ್ಬಂದಿ ಒಳಗೊಂಡಿರುವ ಆರೋಗ್ಯ ವೃತ್ತಿಪರರ
ಅತ್ಯಂತ ಸಮರ್ಪಿತ ತಂಡವನ್ನು ಹೊಂದಿದೆ.
ಈ ಮಾನ್ಯತೆಯೊಂದಿಗೆ, ಫಾದರ್ ಮುಲ್ಲರ್ ಆಸ್ಪತ್ರೆ, ತುಂಬೆ ತನ್ನ ಸ್ಥಾಪಕರಾದ ಫಾದರ್ ಅಗಸ್ಟಸ್ ಮುಲ್ಲರ್ ಅವರ
‘ಗುಣಪಡಿಸಿ ಮತ್ತು ಸಾಂತ್ವನಗೊಳಿಸಿ ‘ಎಂಬ ಧ್ಯೇಯವಾಕ್ಯವನ್ನು ಪ್ರತಿಧ್ವನಿಸಿದೆಎ ಅಪ್ರತಿಮ ಗುಣಮಟ್ಟದ ಆರೋಗ್ಯ
ಸೇವೆಗಳನ್ನು ನೀಡುವ ತನ್ನ ಬದ್ಧತೆಯನ್ನು ಸಾಕಾರಗೊಳಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net