

ಮಂಗಳೂರು: ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ವೈದ್ಯಕೀಯ ಪದವಿ ಪಡೆದಿರುವುದು ಅವಿಸ್ಮರಣೀಯ ಅನುಭವ ನೀಡಿದೆ. ಫಾದರ್ ಮುಲ್ಲರ್ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ, ಸೇವಾ ಮನೋಭಾವ ಬೆಳೆಸುವ ಶ್ರೇಷ್ಠ ಸಂಸ್ಥೆ ಎಂದು ಪುತ್ತೂರು ಡಿವೈಎಸ್ಪಿ ಡಾ.ಗಾನ ಪಿ.ಕುಮಾರ್ ಹೇಳಿದರು.
ಮಂಗಳೂರು ಫಾದರ್ ಮುಲ್ಲರ್ ಎಂಬಿಬಿಎಸ್ ಪದವಿ ಕಾಲೇಜಿನ ಬೆಳ್ಳಿ ಹಬ್ಬದ ಸಮಾರಂಭವನ್ನು ನಗರದ ಫಾ.ಮುಲ್ಲರ್ ಕನ್‌ವೆನ್ಶನ್ ಸೆಂಟರ್ ಸಭಾಂಗಣದಲ್ಲಿ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಂಬಿಬಿಎಸ್ ಪದವಿ ಹಂತದಲ್ಲಿ ಯುವ ವೈದ್ಯರು ತಮ್ಮ ವೃತ್ತಿ ಶಿಕ್ಷಣದ ಜತೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ವಿಪುಲ ಅವಕಾಶವಿದೆ. ಕೇವಲ ರ‌್ಯಾಂಕ್ ಗಳಿಕೆಗೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರದೆ ವಿದ್ಯಾರ್ಥಿಗಳ ಆತ್ಮವಿಶ್ವಾಸ ಮತ್ತು ಸರ್ವಾಂಗೀಣ ಬೆಳವಣಿಗೆಗೆ ಪೋಷಕರು ಸಹಾಯ ನೀಡಬೇಕು ಎಂದರು.
ವೈದ್ಯರು ತಮ್ಮ ವೃತ್ತಿಯಲ್ಲಿ ವ್ಯಕ್ತಿಯ ಆರೋಗ್ಯ ಸಮಸ್ಯೆಯನ್ನು ಯಶಸ್ವಿಯಾಗಿ ಪರಿಹರಿಸಿ ಆತನನ್ನು ರೋಗದಿಂದ ಗುಣಮುಖ ನಾಗುವಂತೆ ಮಾಡುವುದು ಆತನ ಶ್ರೇಷ್ಠ ಸಾಧನೆ ಎಂದು ಅವರು ಅಭಿಪ್ರಾಯಪಟ್ಟರು.
ಅಧ್ಯಕ್ಷ ತೆ ವಹಿಸಿದ್ದ ಫಾದರ್ ಮುಲ್ಲರ್ ಸೇವಾ ಸಂಸ್ಥೆ ಗಳ ಅಧ್ಯಕ್ಷ ಪೀಟರ್ ಪೌಲ್ ಸಲ್ದಾನ ಅವರು ಮಾತನಾಡಿ, ಫಾದರ್ ಮುಲ್ಲರ್ ಸಂಸ್ಥೆಯು ತನ್ನ ಗುಣಮಟ್ಟದ ವೈದ್ಯಕೀಯ ಸೇವೆ ಮೂಲಕ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಆರಂಭದಲ್ಲಿ ಕುಷ್ಠ ರೋಗ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಸ್ಥೆಯು ಬಳಿಕ ವಿವಿಧ ವೈದ್ಯಕೀಯ ಶಿಕ್ಷಣದ ಮಜಲುಗಳನ್ನು ಪ್ರವೇಶಿಸಿ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು.
ಫಾದರ್ ಮುಲ್ಲರ್ ಸೇವಾ ಸಂಸ್ಥೆ ಗಳ ನಿರ್ದೇಶಕ ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಸ್ವಾಗತಿಸಿದರು. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಡೀನ್ ಡಾ.ಆಂಟನಿ ಸಿಲ್ವನ್ ಡಿ ಸೋಜ, ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ವಿವಿಧ ವಿಭಾಗದ ಮುಖ್ಯಸ್ಥರಾದ ಅಜಿತ್ ಮಿನೇಜಸ್, ವಿನ್ಸೆಂಟ್ ಸಿಲ್ವೇಸ್ಟರ್ ಲೋಬೊ, ಜೀವನ್ ಸಿಕ್ವೇರಾ, ಡಾ.ಉದಯ ಕುಮಾರ್, ಡಾ.ಪ್ರಭು ಕಿರಣ್, ಡಾ.ಹೀಲ್ಡಾ, ಜೆಸಿಂತಾ, ಡಾ,ಚರಿಷ್ಮಾ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಲ್ಲಿ ಹೊಸ ವಿಷಯಗಳನ್ನು ಕಲಿಯುವ ಕುತೂಹಲ ಇರಬೇಕು. ಇದರಿಂದ ವೈದ್ಯಕೀಯ ವೃತ್ತಿಯಲ್ಲಿ ಇನ್ನಷ್ಟು ಸಾಧನೆ ಸಾಧ್ಯವಾಗುವುದು. ಫಾದರ್ ಮುಲ್ಲರ್ ಸಂಸ್ಥೆಯ ಮೂಲಕ ಕಲಿತು ಸೇವೆ ಸಲ್ಲಿಸುತ್ತಿರುವ ಯುವ ವೈದ್ಯರೇ ಸಂಸ್ಥೆಯ ರಾಯಬಾರಿಗಳಾಗಿದ್ದ