ನಾಲ್ಕನೇ ದಿನದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ

raichur
raichur
Published on

 ರಾಯಚೂರು ಶ್ರೀ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಮತ್ತು ಎಚ್‌ಸಿಎಂಎಸ್‌ಕೆ ಶಿಕ್ಷಣ ಮಹಾವಿದ್ಯಾಲಯದ ತಾಲೂಕಿನ ಉಡಮಗಲ್ ಖಾನಾಪುರ ಗ್ರಾಮದಲ್ಲಿ ನಾಲ್ಕನೇ ದಿನದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಮಂಗಳವಾರ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ನಿರ್ದೇಶಕ ವಿಜಯಕುಮಾರ್ ಎಸ್.ಪಾಟೀಲ್ ಶಾವಂತಗೇರಾ ಮಾತನಾಡಿ, ಶ್ರೇಷ್ಠದಾನಗಳಲ್ಲಿ ರಕ್ತದಾನ ಒಂದಾಗಿದ್ದು, ಒಬ್ಬ ವ್ಯಕ್ತಿ ರಕ್ತ ಕೊಡುವುದರಿಂದ ನಾಲ್ಕು ಜೀವಗಳನ್ನು ಉಳಿಸುವ ಶಕ್ತಿ ಇದೆ. ರಕ್ತದಾನ ಮಾಡುವುದರಿಂದ ತಮ್ಮ ಆರೋಗ್ಯವನ್ನು ಕೂಡ ಸುಧಾರಿಸಿಕೊಳ್ಳಬಹುದು ಎಂದರು.

ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ.ವಿ.ಜಿ.ಬಾವಲತ್ತಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕೃಷಿಯ ಪಾತ್ರದ ಕುರಿತು ಇಚೇಗೆ ರೈತರು ಪಡುವ ಸಮಸ್ಯೆಗಳು, ದೇಶದಲ್ಲಿ ಜಿಡಿಪಿ ಬೆಳವಣಿಗೆಯಲ್ಲಿ ಕೃಷಿಯ ಕೊಡುಗೆ ಹಾಗೂ ಕೃಷಿಯಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಸಾವಯುವ ಕೃಷಿಯ ಮಹತ್ವ ಮತ್ತು ಉತ್ತಮವಾದ ಮಾರುಕಟ್ಟೆ ವ್ಯವಸ್ಥೆಯ ಜ್ಞಾನ ಇದ್ದರೆ ಯಾವ ರೈತನು ಕೃಷಿಯಲ್ಲಿ ನಷ್ಟವಾಗುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಭೀಮಣ್ಣ ಭಂಡಾರಿ, ಕೆ. ದೇವೇಂದ್ರ ನಾಯಕ್, ಕೆ.ಶರಣ ರೆಡ್ಡಿ ಕಲ್ಲಯ್ಯ ಸ್ವಾಮಿ,ಪ್ರಾಚಾರ್ಯ ಡಾ.ಮಂಜುನಾಥ್ ಪಾಟೀಲ್ ವಟಗಲ್ ಸೇರಿ ಅನೇಕರು ಇದ್ದರು.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net