ಮಂಗಳೂರಿನಲ್ಲಿ ಡ್ರಗ್ಸ್ ಸೇವನೆ ನಾಲ್ವರು ಯುವಕರ ಬಂಧನ

arrested
Published on

ಮಂಗಳೂರು: ವಿವಿಧೆಡೆ ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬುಧವಾರದಂದು ಬಂಗ್ರ ಕೂಳೂರು ಬಳಿ ಮಾದಕ ವಸ್ತು ಸೇವನೆ ಮಾಡಿ ನಿಂತಿದ್ದ ಬೈಕಂಪಾಡಿಯ ನೋಯಲ್ ಪಿಯೂಷ್ ಡಿ ಸೋಜ(23) ನ ವಿರುದ್ದ, ಮಂಗಳವಾರದಂದು ಮೇರಿಹಿಲ್ ಜಂಕ್ಷನ್ ಬಳಿ ಮಾದಕ ವಸ್ತು ಸೇವನೆ ಮಾಡಿ ನಿಂತಿದ್ದ ಕೊಂಚಾಡಿಯ ಉದಿತ್ ಬಿ(29) ವಿರುದ್ದ ಮತ್ತು ಕಾವೂರು ಜಂಕ್ಷನ್ ಬಳಿ ಮಾದಕ ವಸ್ತು ಸೇವನೆ ಮಾಡಿ ನಿಂತಿದ್ದ ಶಕ್ತಿನಗರದ ಜೀತೇಶ(21)ನ ವಿರುದ್ದ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬುಧವಾರದಂದು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಪದವಿನಂಗಡಿ ಬಳಿ ಮಾದಕ ವಸ್ತು ಸೇವನೆ ಮಾಡಿ ನಿಂತಿದ್ದ ಶಕ್ತಿನಗರದ ವರುಣ್ ಸಾಲಿಯಾನ್(25)ನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net