ಕಿತವಾಡ ಫಾಲ್ಸ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ನಾಲ್ವರು ಯುವತಿಯರು ಸಾವು, ಒಬ್ಬಳ ಸ್ಥಿತಿ ಗಂಭೀರ

accident
Published on

ಬೆಳಗಾವಿ: ಕಿತವಾಡ ಫಾಲ್ಸ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ನಾಲ್ವರು ಯುವತಿಯರ ದುರಂತ ಅಂತ್ಯಕಂಡ ಘಟನೆ ಇಂದು(ಶನಿವಾರ) ಸಂಭವಿಸಿದೆ.

ಕರ್ನಾಟಕ- ಮಹಾರಾಷ್ಟ್ರ ಗಡಿಭಾಗದಲ್ಲಿರುವ ಕಿತವಾಡ ಫಾಲ್ಸ್​ಗೆ ಬೆಳಗಾವಿಯಿಂದ 40 ಯುವತಿಯರು ಪ್ರವಾಸ ಹೋಗಿದ್ದರು. ಈ ವೇಳೆ ಸೆಲ್ಫಿ ಫೋಟೋ ತಗೆದುಕೊಳ್ಳುವಾಗ ಐವರು ಕಾಲು ಜಾರಿ ಬಿದ್ದಿದ್ದಾರೆ. ಈ ಪೈಕಿ ನಾಲ್ವರು ದುರಂತ ಅಂತ್ಯಕಂಡಿದ್ದು, ಮತ್ತೊಬ್ಬ ಯುವತಿಯ ಸ್ಥಿತಿ ಗಂಭೀರವಾಗಿದೆ.

ಉಜ್ವಲ್ ನಗರದ ಆಸೀಯಾ ಮುಜಾವರ್(17), ಅನಗೋಳದ ಕುದ್‌ಶೀಯಾ ಹಾಸಂ ಪಟೇಲ್(20), ಝಟ್‌ಪಟ್ ಕಾಲನಿಯ ರುಕ್ಕಶಾರ್ ಭಿಸ್ತಿ(20) ಮತ್ತು ತಸ್ಮಿಯಾ(20) ಮೃತರು.

ಮಕ್ಕಳ ಸಾವಿನ ಸುದ್ದಿ ಕೇಳಿ ಕಂಗಾಲದ ಪಾಲಕರು ಬೆಳಗಾವಿ ಜಿಲ್ಲಾ ಆಸ್ಪತ್ರೆ ಬಳಿಗೆ ದೌಡಾಯಿಸಿದ್ದಾರೆ. ಉಳಿದ ಸ್ನೇಹಿತರೂ ಆಘಾತಗೊಂಡಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಬೆಳಗಾವಿಯ ಭೀಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net